• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಣ್ಣ ಉತ್ತರ ಅಂದ್ರೆ;ಶಾಸಕರು ದಕ್ಷಿಣ ಅನ್ನುತ್ತಿದ್ದಾರೆ!

By Staff
|

ಬೆಂಗಳೂರು, ಅ.16 : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿನ ಜೆಡಿಎಸ್ ಶಾಸಕರ ಸಭೆ, ರೆಸಾರ್ಟ್ ನಲ್ಲಿ ಮಂಗಳವಾರವೂ ಮುಂದುವರೆದಿದೆ. ಮರುಮೈತ್ರಿಯತ್ತ ಆಸಕ್ತರಾಗಿರುವ ಶಾಸಕರನ್ನು ಚುನಾವಣೆಗೆ ಒಲಿಸಲು ಕುಮಾರಸ್ವಾಮಿ ಪರದಾಡುತ್ತಿದ್ದಾರೆ.

ತಮ್ಮ ಸದ್ಯದ ಪರಿಸ್ಥಿತಿ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಒದೆಸಿಕೊಂಡು ಸಾಕಾಗಿದೆ. ಇನ್ನೇನಿದ್ದರೂ ಸಂದರ್ಭ ಎದಿರಾದರೆ ಜನರಿಂದ ಒದೆಸಿಕೊಳ್ಳಲು ನಿರ್ಧರಿಸಿದ್ದೇನೆ. ಎರಡೂ ಪಕ್ಷಗಳಿಂದ ಸಾಕಷ್ಟು ಪಾಠ ಕಲಿತಾಗಿದೆ. ರಾಜ್ಯದ ಜನತೆಯ ಮುಂದೆ ನಿಂತು ಮತ ಕೇಳುವುದೇ ಜೆಡಿಎಸ್‌ನ ಮುಂದಿನ ಗುರಿ. ಜನಸಾಮಾನ್ಯರು ವಿಜಯಮಾಲೆ ಹಾಕಿದರೆ ಸ್ವೀಕರಿಸಲು ಸಿದ್ಧ. ಇಲ್ಲಾ ಒದೆಯುತ್ತಾರೆಂದರೆ ಅದನ್ನು ತಿನ್ನಲೂ ಸಿದ್ಧ ಎಂದು ಹೇಳಿದರು.

ದೇವೇಗೌಡರು ಮತ್ತು ಮಕ್ಕಳಷ್ಟೇ ಒಂದು ಕುಟುಂಬದವರಲ್ಲ. ಪಕ್ಷದ ಶಾಸಕರು, ಕಾರ್ಯಕರ್ತರೆಲ್ಲರೂ ಕುಟುಂಬದ ಸದಸ್ಯರೆ. ನಮ್ಮ ಏಳಿಗೆಯನ್ನು ಸಹಿಸಲಾಗದವರು ಇಲ್ಲಸಲ್ಲದ ಅಪಚಾರ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರೆಸಾರ್ಟ್ ಸಂಸ್ಕೃತಿಯನ್ನು ನಮಗಿಂತ ಮೊದಲು ಹುಟ್ಟುಹಾಕಿದ್ದು ಕಾಂಗ್ರೆಸ್ ಪಕ್ಷ. ಇದೇನೂ ಹೊಸದಲ್ಲ. ಈ ಮೊದಲೂ ಶಾಸಕರು ರೆಸಾರ್ಟ್‌ಗೆ ಹೋಗಿಬಂದಿದ್ದಾರೆ. ಆದರೆ ಹಣೆಪಟ್ಟಿ ಮಾತ್ರ ನಮಗೆ ಅಂಟಿಸಲಾಗಿದೆ ಎಂದು ರೆಸಾರ್ಟ್ ಸಂಸ್ಕೃತಿಯ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X