ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಸರ್ಕಾರ ಉರುಳಲು ಕಾರಣ; ಕುಜಸ್ತಂಭ

By Staff
|
Google Oneindia Kannada News

ಶಿವಮೊಗ್ಗ, ಅ.16 : ಕರ್ನಾಟಕ ರಾಜಕಾರಣ : ಯಾಕೆ ಹೀಗಾಯ್ತು? ಈ ಪ್ರಶ್ನೆಗೆ ಯಾವ ಪಕ್ಷದ ಮುಖಂಡರಲ್ಲೂ ಉತ್ತರವಿಲ್ಲ. ಮುಂದೇನು ಎಂಬುದು ಸಹಾ ಯಾರಿಗೂ ಗೊತ್ತಿಲ್ಲ. ಆದರೆ ದಿನಕ್ಕೊಬ್ಬ ಜ್ಯೋತಿಷಿ, ರಾಜಕಾರಣವನ್ನು ಕೂಡಿ, ಕಳೆದು, ಗುಣಿಸಿ, ಭಾಗಿಸಿ ಭವಿಷ್ಯ ನುಡಿಯುತ್ತಿದ್ದಾರೆ. ಶಿವಮೊಗ್ಗದ ಎಸ್.ಎಸ್.ನಾಗೇಶ್ ಭಟ್ ಅವರು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣವೇನು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.

18.07.2005ರಿಂದ 05.02.2006ರವರೆಗೆ ಮೇಷ ರಾಶಿಯಲ್ಲಿ ಕುಜಸ್ತಂಭ ಏರ್ಪಟ್ಟಾಗ ಧರ್ಮಸಿಂಗ್ ಸರ್ಕಾರ ಮುರಿದುಬಿತ್ತು. ಮತ್ತೆ 16.09.2007ರಿಂದ 29.04.2008ರವರೆಗೆ ಮಿಥುನರಾಶಿಯಲ್ಲಿ ಕುಜ ಸ್ತಂಭವುಂಟಾಗಿರುವುದರಿಂದ, ಕುಮಾರಸ್ವಾಮಿ ಸರ್ಕಾರ ಪತನವಾಗಿದೆ.

14.02.2008ರಿಂದ 14.03.2008ರವರೆಗೆ ರವಿ ಮತ್ತು ಶನಿ ಗ್ರಹಗಳಿಗೆ ಪರಿವರ್ತನ ಯೋಗ ಇದೆ. ಇದು ಮೂವತ್ತು ವರ್ಷದ ನಂತರ ಆಗುತ್ತಿರುವುದರಿಂದ, ಈ ಪರಿವರ್ತನ ಯೋಗದ ಫಲವನ್ನುಬಿಜೆಪಿ ಪಡೆಯಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 148ರಿಂದ 162 ಸ್ಥಾನಗಳ ಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಗುಜರಾತ್ ನಲ್ಲಿ ಬಿಜಿಪಿ ಶೇ.28ರಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ.

14.02.2009ರಲ್ಲಿ ರವಿ ಮತ್ತು ಶನಿ ಪರಿವರ್ತನ ಯೋಗದ ಬಲದಿಂದ ರಾಹುಲ್ ಗಾಂಧಿಯವರ ಅಧಿಕಾರ ಹೆಚ್ಚಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X