ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ 8ಮಹಿಳಾ ನಾಯಕಿಯರ ಪಟ್ಟಿಯಲ್ಲಿ ಮಾಯಾವತಿ

By Staff
|
Google Oneindia Kannada News

ನ್ಯೂಯಾರ್ಕ್, ಅ.15 : ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ(51), ವಿಶ್ವದ ಎಂಟು ಪ್ರಸಿದ್ಧ ಮಹಿಳೆಯರಲ್ಲಿ ಒಬ್ಬರು. ಹಾಗಂತ ಯುಎಸ್‌ನ ಪ್ರಸಿದ್ಧ ನಿಯತಕಾಲಿಕೆ ನ್ಯೂಸ್‌ವೀಕ್ ಪ್ರಕಟಿಸಿದೆ.

ವಿಶ್ವದ ಪ್ರಸಿದ್ಧ ಎಂಟು ಮಹಿಳೆಯರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕಿಯಾದ ಮಾರ್ಗರೇಟ್ ಚಾನ್, ಫ್ರೆಂಚ್‌ ವಾಣಿಜ್ಯಕೂಟಗಳ ಒಡತಿ ಅರೇವಾ ಅನೆ ಸಹ ಇದ್ದಾರೆ. ದಲಿತರು, ಮೇಲ್ವರ್ಗದ ಜನ ಮತ್ತು ಮುಸ್ಲಿಂರನ್ನು ಏಕೀಭವಿಸಿ ಉ.ಪ್ರ ವಿಧಾನಸಭಾ ಚುನಾವಣೆಗಳಲ್ಲಿ ಬಹುಮತದಿಂದ ಗೆದ್ದ ಬಹುಜನ್ ಸಮಾಜ್ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಇತರ ರಾಜ್ಯಗಳಿಗೆ ಮಾದರಿಯಾಗಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಮಾಯಾವತಿ ಪಕ್ಷ ಶ್ರಮಿಸುತ್ತಿರುವುದಾಗಿ ನ್ಯೂಸ್‌ವೀಕ್ ತಿಳಿಸಿದೆ.

ನಮ್ಮ ಪಕ್ಷ ದಲಿತರ ಏಳಿಗೆಗಾಗಿ ಶ್ರಮಿಸುತ್ತಿದೆ. ಬಹುತೇಕ ರಾಜಕೀಯ ಪಕ್ಷಗಳಲ್ಲಿ ಮೇಲ್ವರ್ಗದ ಜನರು ಪ್ರಭಾವಶಾಲಿಯಾಗಿದ್ದಾರೆ. ಆದರೆ ನಾವು ಗ್ರಾಮೀಣ ಪ್ರದೇಶಗಳಲ್ಲಿ ಜಾತಿ, ಮತವನ್ನು ಮೀರಿ ಬಡವರ ಉದ್ಧಾರಕ್ಕಾಗಿ ಶ್ರಮಿಸಿದೆವು. ಹಾಗಾಗಿ ನಮ್ಮ ಪಕ್ಷ 17ವರ್ಷಗಳ ಸುದೀರ್ಘ ರಾಜಕೀಯ ಚರಿತ್ರೆಯಲ್ಲಿ ಪ್ರಥಮ ಬಾರಿಗೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂತು ಎಂದು ಮಾಯಾವತಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X