ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಬರ್ ಕ್ರೈಂ , ಹ್ಯಾಕರ್ ಗಳಿಂದ ರಕ್ಷಣೆ ಬೇಕೆ? ತಿಳಿದುಕೊಳ್ಳಿ

By Staff
|
Google Oneindia Kannada News

How to prevent your portal from Cyber intruders?!ಬೆಂಗಳೂರು, ಅ.14: ಸಿಲಿಕಾನ್ ಸಿಟಿ ಬೆಂಗಳೂರು ಸೈಬರ್ 'ಅಪರಾಧಗಳ ತವರೂರು' ಎಂಬ ಕುಖ್ಯಾತಿಗೆ ಪಾತ್ರವಾಗುತ್ತಿರುವುದು ಗೋಪ್ಯವಾಗಿ ಉಳಿದಿಲ್ಲ.

ಡಿಜಿಟಲ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆ ನಗರದ ಏಟ್ರಿಯಾ ಹೋಟೆಲ್ ನಲ್ಲಿ ಅ.17ರಂದು ಬೆಳಗ್ಗೆ 9:30ಕ್ಕೆ ಈ ವಿಚಾರ ಸಂಕಿರಣವನ್ನು ಆಯೋಜಿಸಿದೆ.

ಆರ್ ವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೈಬರ್ ಕಾನೂನಿನ ಬಗ್ಗೆ ಈವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಿದ್ದಾರೆ

ಭಾರತದಲ್ಲಿನ ಸೈಬರ್ ಲೋಕಕ್ಕೆ ರಕ್ಷಣೆ,ಹ್ಯಾಕರ್ ಗಳ ದಾಳಿಗೆ ಪ್ರತಿತಂತ್ರ, ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿಚಾರಸಂಕಿರಣ ಏರ್ಪಡಿಸಲಾಗಿದೆ.

ಸರಕಾರಿ ಸಂಸ್ಥೆಗಳು, ರಕ್ಷಣಾ ವಲಯದ ಅನೇಕ ಗುಪ್ತ ಮಾಹಿತಿ ಸೋರಿಕೆಯ ಬಗ್ಗೆ ವರದಿಯಾಗಿರುವ ಹಿನ್ನೆಲೆಯಲ್ಲಿ ಸೈಬರ್ ಲೋಕದ ರಕ್ಷಣೆಯ ಬಗ್ಗೆ ಚಿಂತಿಸಬೇಕಾಗಿದೆ. ಸೈಬರ್ ಕಾನೂನು ಜಾರಿಯಲ್ಲಿದ್ದರೂ, ಅಂತರ್ಜಾಲದಲ್ಲಿ ನಡೆಯುವ ಅವ್ಯವಹಾರಗಳಲ್ಲಿ ಕೆಲವು ಮಾತ್ರ ದಾಖಲಾಗುತ್ತಿದೆ.ಮಾಹಿತಿ ಸೋರಿಕೆಯಿಂದ ಆಗಬಹುದಾದ ಅನಾಹುತದ ಬಗ್ಗೆ ಜನಸಾಮಾನ್ಯರಿಂದ ಹಿಡಿದು, ಸಂಘ- ಸಂಸ್ಥೆಗಳು, ರಕ್ಷಣಾಧಿಕಾರಿಗಳ ವರೆಗೂ ಜಾಗೃತಿ ಮೂಡಿಸುವ ಅಗತ್ಯತೆ ಕಂಡು ಬಂದಿದೆ ಎಂದು ಡಿಜಿಟಲ್ ಸೊಸೈಟಿ ಅಧ್ಯಕ್ಷ ವಿಜಯಶಂಕರ್ ಸುದ್ದ್ದಿಗಾರರಿಗೆ ತಿಳಿಸಿದರು.

ಯುವಜನರಲ್ಲಿ ತಿಳುವಳಿಕೆ ಅಗತ್ಯ:
ಸೋಷಿಯಲ್ ಕಮ್ಯೂನಿಟಿ ವೆಬ್ ಸೈಟ್ ಮೂಲಕ ಅನೈತಿಕ ಚಟುವಟಿಕೆಗಳಲ್ಲಿ ನಿರತರಾಗುವುದು, ಕುತೂಹಲಕ್ಕಾಗಿ ನಕಲಿ ವೆಬ್ ಸೈಟ್ ಸೃಷ್ಟಿಸುವುದು, ಪರರ ಪಾಸ್ ವರ್ಡ್ ಕದ್ದು ಇ ಮೇಲ್ ಓದುವುದು ಮುಂತಾದ ಕೃತ್ಯಗಳು ಯುವಜನರಲ್ಲಿ ಹೆಚ್ಚಾಗುತ್ತಿದೆ. ಈ ದುಷ್ಕೃತ್ಯಗಳು ಮುಂದೆ ಬ್ಯಾಂಕ್ ನೆಟ್ ವರ್ಕಿಂಗ್ ವ್ಯವಸ್ಥೆ ಹಾಳು ಮಾಡುವ, ದೇಶದ ರಕ್ಷಣಾ ಇಲಾಖೆಯ ತಾಣಗಳ ಸುರಕ್ಷತೆಯನ್ನು ಬೇಧಿಸುವವರೆಗೂ ಸಾಗುತ್ತಿದೆ.ಈ ಬಗ್ಗೆ ಎಚ್ಚರ ವಹಿಸುವ ಅಗತ್ಯತೆ ಹೆಚ್ಚಾಗಿದೆ .

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಬೆಂಗಳೂರಿನ ಮೂವರು ಸಾಫ್ಟವೇರ್ ಇಂಜಿನಿಯರ್ ಬಂಧನ
ಆರ್ಕುಟ್ ಅಂತರ್ಜಾಲ ವೇದಿಕೆಯಲ್ಲಿ ಕೊಲೆಗೆ ಸಂಚು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X