ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲ್ ನಗರಿ ಬೆಂಗಳೂರಿನಲ್ಲೀಗ ಇನ್ನೊಂದು ಮಲ್ಟಿಪ್ಲೆಕ್ಸ್

By Staff
|
Google Oneindia Kannada News

ಬೆಂಗಳೂರು, ಅ.13 : ಉದ್ಯಾನ ನಗರಿ ಈಗ ಶಾಪಿಂಗ್ ಮಾಲ್ ಗಳ ನಗರಿ. ಈ ನಗರದಲ್ಲೀಗ ಮಲ್ಟಿಪ್ಲೆಕ್ಸ್ ಗಳದ್ದೇ ಕಾರುಬಾರು. ನಗರಲ್ಲಿ ಇನ್ನೊಂದು ಮಲ್ಟಿಪ್ಲೆಕ್ಸ್ ಇದೀಗ ಆರಂಭಗೊಂಡಿದೆ. ನಗರದ ಮೂವಿಲ್ಯಾಂಡ್ ಈಗ ಮೂರು ಪರದೆಗಳನ್ನು ಹೊಂದಿದೆ.

224 ಗೋಲ್ಡ್ ಕ್ಲಾಸ್ ಮತ್ತು 761 ಸಿಲ್ವರ್ ಕ್ಲಾಸ್ ಸೇರಿದಂತೆ 985 ಆಸನಗಳ ಎರಡು ಚಿತ್ರಮಂದಿರಗಳು ಶುಕ್ರವಾರದಿಂದ ಆರಂಭಗೊಂಡಿವೆ. ಇಲ್ಲಿ ದಂಪತಿಗಳಿಗಾಗಿ ವಿಶೇಷ ಲವ್ ಸೀಟ್ ಗಳೂ ಇವೆ. ಆರಂಭದ ಆಕರ್ಷಣೆಗಾಗಿ ಸಿಲ್ವರ್ ಕ್ಲಾಸ್ ಟಿಕೆಟ್ ದರ 100 ರೂಪಾಯಿ, ಗೋಲ್ಡ್ ಕ್ಲಾಸ್ ಟಿಕೆಟ್ ದರ 120ರೂಪಾಯಿ.

33,000 ಚದುರ ಅಡಿಗಳಲ್ಲಿ ಫನ್ ಸಿನಿಮಾಸ್ ಎಂಬ ಹೆಸರಲ್ಲಿ ಈ ಮಲ್ಟಿಪ್ಲೆಕ್ಸ್ ತಲೆ ಎತ್ತಿದೆ. ಆತ್ಯಾಧುನಿಕ ಸೌಲಭ್ಯಗಳಿಂದಾಗಿ, ಚಿತ್ರ ವೀಕ್ಷಣೆ ಹೊಸ ಅನುಭವ ನೀಡಲಿದೆ ಎಂದು ಪ್ರಕಟಣೆ ಹೇಳಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X