ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಚನೆ: ಶಿರಾಡಿ ಘಾಟ್ ನಲ್ಲಿ ರಿಪೇರಿ ಕೆಲಸ ನಡೆಯುತ್ತಿದೆ!

By Staff
|
Google Oneindia Kannada News

ಮಂಗಳೂರು , ಅ.10 : ಬೆಂಗಳೂರು ಹಾಗೂ ಮಂಗಳೂರು ರಾಷ್ಟೀಯ ಹೆದ್ದಾರಿ 48ರಲ್ಲಿರುವ ಶಿರಾಡಿ ಘಾಟ್ ನ ರಸ್ತೆ ದುರಸ್ತಿ ಕಾರ್ಯ , ಕೊನೆಗೂ ಪ್ರಾರಂಭವಾಗಿದೆ.

ಕಾರು, ಜೀಪು ಹಾಗೂ ಮೋಟರ್ ಸೈಕಲ್ ನಂತಹ ವಾಹನಗಳು ಕಷ್ಟಪಟ್ಟು ಓಡಾಡಲು ಅನುಮತಿ ಇದೆ. ಭಾರಿ ವಾಹನಗಳಾದ ಲಾರಿ, ಬಸ್ಸು, ಟ್ಯಾಂಕರ್, ಟ್ರೆಕ್ ಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 2008ರ ಮಾರ್ಚ್ ಅಂತ್ಯದವರೆಗೂ ಈ ದುರಸ್ತಿ ಕಾರ್ಯನಡೆಯಲಿದೆ.

ಸತತ ಮಳೆಯಿಂದ ಪೂರ್ಣವಾಗಿ ಹೊಂಡಮಯವಾದ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಲ್ಲವೆಂದು, ಸುಮಾರು ಒಂದು ವರ್ಷಗಳ ನಂತರ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವರಿಕೆಯಾಗಿದೆ. ಮಂಗಳೂರು ಕಡೆಗೆ ಸಾಗುವವರು ಮಡಿಕೇರಿ ಮಂಗಳೂರು ರಾಜ್ಯ ಹೆದ್ದಾರಿಯ ಸಂಪಿಗೆ ಘಾಟ್ ಬಳಸಿಕೊಂಡು ಹೋಗಬಹುದು. ಬೆಂಗಳೂರು ಕಡೆಗೆ ಹೋಗುವವರು ಚಿಕ್ಕಮಗಳೂರು-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿನ ಚಾರ್ಮಾಡಿ ಘಾಟ್ ಬಳಸಿ ಸಾಗಬಹುದಾಗಿದೆ.

ಸುಮಾರು 38 ಕಿ.ಮೀ ಇರುವ ಶಿರಾಡಿ ಘಾಟಿನ 226ನೇ ಮೈಲಿಗಲ್ಲಿನಿಂದ 264ನೇ ಮೈಲಿಗಲ್ಲಿನ ವರೆಗಿನ ತಿರುವು ರಸ್ತೆಗಳ ದುರಸ್ತಿಗಾಗಿ ಸುಮಾರು 33 ಕೋಟಿ ವ್ಯಯಿಸಲಾಗುತ್ತಿದೆ.

ಯಾತ್ರಿಕರಿಗೆ ಕಷ್ಟ :

ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯಕ್ಕೆ ತೆರಳುವ ಯಾತ್ರಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳು, ಚಾರ್ಮಾಡಿ ಘಾಟ್ ಹಾಗೂ ಸಂಪಿಗೆ ಘಾಟ್ ಹಾದಿಯಿಂದ ತೆರಳುತ್ತಿದೆ. ಇದರಿಂದ ಹೆಚ್ಚಿನ ದೂರ ಕ್ರಮಿಸುವಂತಾಗುತ್ತದೆ .ಬಸ್ಸು ದರ ಏರಿಕೆ ಕಾಣುವ ಸಂಭವವಿದೆ. ರಾಜಹಂಸ ಬಸ್ ದರ 25ರೂ.ಹಾಗೂ ಐರಾವತ ಬಸ್ ದರ 40 ರೂ.ಏರಿಕೆ ಕಾಣುವ ಸಾಧ್ಯತೆಗಳಿವೆ. ಹೈ ಟೆಕ್ ಬಸ್ಸುಗಳ ಓಡಾಟವನ್ನು ಕಮ್ಮಿಮಾಡಲಾಗಿದೆ. ವಾಹನಗಳ ಅಧಿಕ ಸಂಚಾರದಿಂದ ಚಾರ್ಮಾಡಿ ಘಾಟ್ ಹಾಗೂ ಸಂಪಿಗೆ ಘಾಟ್ ರಸ್ತೆಗಳು ರಸ್ತೆಗಳೂ ಹಾನಿಗೊಳಗಾಗುತ್ತಿವೆ.

ಗ್ರೀನ್ ರೂಟ್ ಗೆ ಗ್ರೀ ನ್ ಸಿಗ್ನಲ್ :

ಶಿರಾಡಿ ಘಾಟಿನ ಕಥೆ ಹೀಗಾದರೆ, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು- ಮಂಗಳೂರು ರೈಲು ಮಾರ್ಗ ಮುಂದಿನ ತಿಂಗಳು ಸಂಚಾರಕ್ಕೆ ಮುಕ್ತವಾಗಲಿದೆ. ಬೆಂಗಳೂರಿಗೆ ಆಗಮಿಸಿದ್ದ ರೈಲ್ವೇ ಖಾತೆ ರಾಜ್ಯ ಸಚಿವ ಆರ್.ವೇಲು, ನವೆಂಬರ್ 15ಕ್ಕೆ ಮಂಗಳೂರಿಗೆ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X