ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ತ್ರೈಮಾಸಿಕದಲ್ಲಿ ಐಗೇಟ್ ಭರ್ಜರಿ ಫಸಲು

By Staff
|
Google Oneindia Kannada News

ಬೆಂಗಳೂರು, ಅ.10 : ಲಾಭದ ಬಗ್ಗೆ ಆತಂಕದ ಮೋಡ ಕವಿದಿದ್ದರೂ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನಕ್ಕೆ ಲಗ್ಗೆ ಹಾಕಿರುವ ಐಗೇಟ್ ಗ್ಲೋಬಲ್ ಸೊಲ್ಯೂಷನ್ಸ್ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭರ್ಜರಿ ಫಸಲು ಬುಟ್ಟಿಗೆ ಹಾಕಿಕೊಂಡಿದೆ.

ಸೆಪ್ಟೆಂಬರ್ 30ಕ್ಕೆ ಮುಗಿದ ತ್ರೈಮಾಸಿಕದಲ್ಲಿ ಐಗೇಟ್ ಒಟ್ಟು 200 ಕೋಟಿಯಷ್ಟು ವಹಿವಾಟು ಮಾಡಿದ್ದು 22 ಕೋಟಿ ಲಾಭಂಶ ಗಳಿಸಿದೆ. ಶೇ.127ರಷ್ಟು ಲಾಭಾಂಶದಲ್ಲಿ ಜಿಗಿತ ಕಂಡಿದೆ.

ಮಿಲಿಯನ್ ಬ್ರಾಕೆಟ್‌ನ ಮೂರು ಗ್ರಾಹಕರನ್ನು ತಮ್ಮ ಸೇವಾವ್ಯಾಪ್ತಿಯಲ್ಲಿ ತಂದಿದ್ದೇ ಹೆಚ್ಚಿನ ಲಾಭಾಂಶ ಗಳಿಸಿಲು ಸಾಧ್ಯವಾಯಿತು ಎಂದು ಐಗೇಟ್‌ನ ಸಿಇಓ ಫಣೀಶ್ ಮೂರ್ತಿ ಬುಧವಾರ ಪತ್ರಕರ್ತರಿಗೆ ಲಾಭನಷ್ಟಗಳ ಬಗ್ಗೆ ವಿವರಿಸಿದರು.

ಐಬಿಎಂನಿಂದ 'ಎಕ್ಸ್‌ಪ್ರೆಸ್ ಅಡ್ವಾಂಟೇಜ್' ಸೇವೆ ಪ್ರಾರಂಭ

ಉತ್ಪನ್ನ, ಸೇವೆ, ಪರಿಹಾರ ಮತ್ತು ಹಣಕಾಸು ಸೇವೆಗಳನ್ನೊಳಗೊಂಡ 'ಎಕ್ಸ್‌ಪ್ರೆಸ್ ಅಡ್ವಾಂಟೇಜ್' ಎಂಬ ವಿಶೇಷ ಪ್ಯಾಕೇಜನ್ನು ಸಣ್ಣ ಮತ್ತು ಮಧ್ಯಮ ಕಂಪನಿಗಳಿಗಾಗಿ ಐಬಿಎಂ ಪ್ರಾರಂಭಿಸಿದೆ.

ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಅತಿ ವೇಗದಲ್ಲಿ ಬೆಳೆಯುತ್ತಲಿವೆ ಮತ್ತು ತೀವ್ರವಾದ ಪೈಪೋಟಿಯನ್ನು ಎದುರಿಸುತ್ತಿವೆ. ಅತ್ಯುತ್ತಮ ಸೇವೆಗಾಗಿ ನಂಬಿಕಸ್ತ ಭಾಗೀದಾರರನ್ನು ಯಾವತ್ತಿಗೂ ಎದಿರು ನೋಡುತ್ತಿರುತ್ತವೆ ಎಂದು ಭಾರತದ ಐಟಿ ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಐಬಿಎಂನ ನಿರ್ದೇಶಕ ರಮೇಶ್ ನರಸಿಂಹನ್ ವಿವರಿಸಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X