• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಪ್ರಿಲ್ 2008ಕ್ಕೂ ಮುಂಚೆ ಲೋಕಸಭೆ ಚುನಾವಣೆ ಇಲ್ಲ

By Staff
|

ನವದೆಹಲಿ, ಅ.10 : ಏ.2008ಕ್ಕೂ ಮೊದಲು ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. ಈ ಮಹಾ ಚುನಾವಣೆಗೆ ಚುನಾವಣಾ ಆಯೋಗ ಇನ್ನು ಸಜ್ಜಾಗದಿರುವುದೇ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಕೇಂದ್ರದ ಯುಪಿಎ ಹಾಗೂ ಎಡಪಕ್ಷಗಳು 'ಅಣು"ಬಿಕ್ಕಟ್ಟಿನಲ್ಲಿ ತೊಳಲಾಡುತ್ತಿರುವ ಕಾರಣ, ಯಾವ ಕ್ಷಣದಲ್ಲಿ ಬೇಕಾದರೂ ಸರ್ಕಾರ ಉರುಳಬಹುದು. ದೇಶ ಚುನಾವಣೆಗೆ ಸಜ್ಜಾಗಬಹುದು. ಏ.2008ಕ್ಕೂ ಮುಂಚೆ ಚುನಾವಣೆಗಳು ಏಕೆ ಸಾಧ್ಯವಿಲ್ಲ ಎಂಬುದನ್ನು ತಜ್ಞರು ವಿಶ್ಲೇಷಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ 675ದಶಲಕ್ಷ ಹೊಸ ಮತದಾರರನ್ನು ಪಟ್ಟಿಗೆ ಸೇರಿಸಲು ಕನಿಷ್ಟ ನಾಲ್ಕು ತಿಂಗಳ ಸಮಯ ಬೇಕಾಗುತ್ತದೆ. ಸಾಲದಕ್ಕೆ ವಾತಾವರಣ ವೈಪರೀತ್ಯಗಳು ಮತ್ತಷ್ಟು ಸಮಯವನ್ನು ತೆಗೆದುಕೊಳ್ಳಬಹುದು. ಮತಗಟ್ಟೆಗಳಿಗಾಗಿ ಶಾಲಾ,ಕಾಲೇಜುಗಳನ್ನು ಆಯ್ಕೆ ಮಾಡಬೇಕಾಗುತ್ತದೆ.

ಚುನಾವಣೆ ಈ ದಿನ ಎಂದು ನಿರ್ಧರಿಸಿದರೂ ಏಪ್ರಿಲ್‌ಗಿಂತ ಮುಂಚಿತವಾಗಿ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಕನಿಷ್ಟ ನಾಲ್ಕು ತಿಂಗಳ ಸಮಯ ಬೇಕಾಗುತ್ತದೆ ಎಂದು ಮಾಜಿ ಚುನಾವಣಾ ಆಯೋಗದ ಸಲಹೆಗಾರರಾದ ಕೆ.ಜೆ. ರಾವ್ ತಿಳಿಸಿದ್ದಾರೆ.

ಚುನಾವಣಾ ಆಯೋಗ ಚುನಾವಣೆಗಳನ್ನು ನಡೆಸಲು ಸದಾ ಸಿದ್ಧವಿರುತ್ತದೆ. ಆದರೆ ನಿಯಮಿತವಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಾಗಿರುವುದರಿಂದ ಸಾಕಷ್ಟು ತಯಾರಿ ಬೇಕಾಗುತ್ತದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತರಾ ಬಿ.ಬಿ ಟಂಡನ್ ತಿಳಿಸಿದರು. ತಜ್ಞರ ಪ್ರಕಾರ ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಚುನಾವಣೆಗಳನ್ನು ನಡೆಸುವುದು ತುಂಬಾ ಕಷ್ಟ. ಸಮರೋಪಾದಿ ಕೆಲಸ ಮಾಡಬೇಕಾಗುತ್ತದೆ. ಸಾಲದಕ್ಕೆ ರಕ್ಷಣೆ ಹಾಳುಮೂಳು ಎಂದು ಖರ್ಚುವೆಚ್ಚಗಳೂ ಅಧಿಕವಾಗಿರುತ್ತವೆ.

ಲೋಕಸಭಾ ಚುನಾವಣೆಗೆ ಏನಿಲ್ಲವೆಂದರೂ 300ರಿಂದ 400 ಕೋಟಿ ರೂ. ಬೇಕಾಗುತ್ತದೆ. ಮಾರ್ಚ್ 2008ರ ಒಳಗೆ ನಡೆಯಬೇಕಾಗಿರುವ ಗುಜರಾತ್, ಹಿಮಾಚಲ ಪ್ರದೇಶ್, ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಡಿಸೆಂಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಉತ್ತರದ ರಾಜ್ಯಗಳಲ್ಲಿ ವಿಪರೀತ ಚಳಿಯ ಕಾರಣ ಮತದಾನ ಮಾಡಲು ಜನ ಬರುವುದಿಲ್ಲ. ಈ ಒಂದು ಕಾರಣಕ್ಕೂ ಏ. 2008ಕ್ಕಿಂತಲೂ ಮುಂಚೆ ಚುನಾವಣೆಗಳನ್ನು ನಡೆಸಲು ಆಯೋಗ ಹಿಂದು ಮುಂದು ನೋಡುತ್ತಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಚುನಾವಣೆಗಳನ್ನು ನಡೆಸಲು 8 ಲಕ್ಷ ಶಾಲಾ ಕಟ್ಟಡಗಳು ಬೇಕು. ಈ ಅವಧಿಯಲ್ಲಿ ಶಾಲಾ ಕಾಲೇಜಿನ ವಾರ್ಷಿಕ ಪರೀಕ್ಷೆಗಳಿರುವ ಕಾರಣ ಚುನಾವಣೆ ಕಷ್ಟ. ಮತ್ತೊಂದು ಮುಖ್ಯ ವಿಚಾರ ಅಂದರೆ ಐದು ಹಂತಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗುತ್ತದೆ.

ಜನವರಿ 1ರಿಂದ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುವುದು. ಈ ಬಾರಿ ಎಲೆಕ್ಟ್ರಾನಿಕ್ ಚುನಾವಣಾ ಗುರುತಿನ ಚೀಟಿಗಳನ್ನು ಕೊಡಲಾಗುವುದು ಎಂದು ರಾವ್ ತಿಳಿಸಿದ್ದಾರೆ.

(ಏಜನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more