• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಶೇ.90ರಷ್ಟು ಏರಿದ ಬಿಯರ್ ಮಾರಾಟ!

By Staff
|

ಬೀರು ಹೀರುವ 'ಬೀರ್' ಬಲ್ಲರ ಸಂತತಿ ಹೆಚ್ಚುತ್ತಿದೆಯಂತೆ ಚಿಯರ್ಸ್...ಬೆಂಗಳೂರು, ಅ.10 : ದೇಶದಲ್ಲಿ ಬಿಯರ್ ಸೇವಿಸುವವರ ಪ್ರಮಾಣ ಶೇ. 90ರಷ್ಟು ಅಧಿಕವಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಈ ವಿಚಾರದಲ್ಲಿ ಬ್ರೆಜಿಲ್, ರಷ್ಯಾ, ಚೀನಾ ದೇಶಗಳನ್ನೂ ಭಾರತ ಹಿಂದಿಕ್ಕಿದೆ.

2002ರಿಂದ 2007 ರವರೆಗೆ ಬಿಯರ್ ಕುಡಿಯುವವರ ಪ್ರಮಾಣ ಏರುತ್ತಾ ಬಂದು ಶೇ.90ಕ್ಕೆ ನಿಂತಿದೆ. ಬ್ರೆಜಿಲ್‌ನಲ್ಲಿ ಶೇ.20, ರಷ್ಯಾದಲ್ಲಿ ಶೇ.50 ಹಾಗೂ ಚೀನಾದಲ್ಲಿ ಶೇ. 60ರಷ್ಟು ಏರಿಕೆ ಕಂಡಿದೆ ಎಂದು 'ಕೆನಡಿಯನ್" ವರದಿ ತಿಳಿಸಿದೆ. ಬಿಯರ್‌ನ ಏರಿಕೆಗೆ ಪಂಜಾಬ್, ಹರಿಯಾಣ, ರಾಜಸ್ಥಾನ ರಾಜ್ಯಗಳ ಕೊಡುಗೆಯೂ ಅಧಿಕ ಎಂತಲೇ ಹೇಳಬೇಕು.

ಮತ್ತೊಂದು 'ಕಿಕ್"ನ ವಿಚಾರ ಅಂದ್ರೆ ಭಾರತೀಯರು ಸ್ಟ್ರಾಂಗ್ ಬಿಯರನ್ನು ಬಯಸುತ್ತಿರುವುದು. ದೇಶದಲ್ಲಿ ಸ್ಟ್ರಾಂಗ್ ಬಿಯರ್‌ ಹೀರುವವರು ಶೇ.70ರಷ್ಟಿದ್ದಾರೆ. ಬದಲಾದ ಜೀವನ ವಿಧಾನ, ತೆರಿಗೆಯಲ್ಲಾದ ಬದಲಾವಣೆ, ಸುಧಾರಣೆಗೊಂಡ ವಿತರಣಾ ವ್ಯವಸ್ಥೆ, ಕಡಿಮೆ ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಕುರಿತು ಸಡಿಲಗೊಂಡ ನಿಯಮಗಳೇ ಈ ಹೆಚ್ಚಳಕ್ಕೆ ಕಾರಣ ಎಂದು ವರದಿ ತಿಳಿಸಿದೆ.

ಈ ಹೆಚ್ಚಳವನ್ನು ಕಂಡು ಬಿಯರ್ ತಯಾರಿಕಾ ಕಂಪನಿಗಳು ಭಾರತದ ಕಡೆ ವಾಲುತ್ತಿವೆ. ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳಾದ ಅನೇಷರ್-ಬುಷ್, ಸ್ಯಾಬ್‌ಮಿಲ್ಲರ್, ಕಾರ್ಲ್ಸ್‌ಬರ್ಗ್, ಇನ್ಬೇವ್ ಹಾಗೂ ಹೀನೆಕಿನ್ ತಮ್ಮ ವಹಿವಾಟನ್ನು ಭಾರತದಲ್ಲಿ ಈಗಾಗಲೇ ಪ್ರಾರಂಭಿಸಿವೆ. ಇನ್ನೂ ಹಲವು ಕಂಪನಿಗಳು ಭಾರತದಲ್ಲಿ ತಮ್ಮ ವ್ಯಾಪಾರವನ್ನು ಶುರು ಮಾಡಲು ಜಾತಕ ಪಕ್ಷಿಗಳಂತೆ ಕಾದು ಕುಳಿತಿವೆ.

ಭಾರತದಲ್ಲಿ ಒಟ್ಟು ಬಿಯರ್‌ನ ಮಾರುಕಟ್ಟೆ ಪ್ರಮಾಣ 7.8 ಲೀಟರ್‌ನ 136 ದಶಲಕ್ಷ ಕೇಸ್‌‌ಗಳು ಎಂದು ವರದಿಯಲ್ಲಿ ತಿಳಿಸಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X