• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒನ್‌ಬುಕ್‌ಮಾರ್ಕ್ಸ್‌ನಿಂದ ನಿಮ್ಮ ಬ್ಲಾಗ್ ಆದಾಯ ಹೆಚ್ಚಿಸಿಕೊಳ್ಳಿ

By Staff
|

ಕಾಲ ಬದಲಾಗಿದೆ, ಅಗತ್ಯಗಳು ಬದಲಾಗಿವೆ, ಅಭಿವ್ಯಕ್ತಪಡಿಸುವ ರೀತಿಗಳು ಕೂಡ ಬದಲಾಗಿವೆ. ಇದೆಲ್ಲ ಇಂಟರನೆಟ್ ಮಹಿಮೆ. ಹೆಚ್ಚು ಕಡಿಮೆ ಇಂಟರನೆಟ್ ಬಳಸುವ ಗ್ರಾಹಕರೆಲ್ಲರೂ ಬ್ಲಾಗ್‌ಗೆ ಅಂಟಿಕೊಂಡಿದ್ದಾರೆಂದು ಹೇಳಿದರೂ ತಪ್ಪಾಗಲಾರದು. ಬ್ಲಾಗ್‌ಗಳ ಬೆನ್ನತ್ತಿರುವ ಟೆಕ್ನೋರತಿ ಸರ್ಚ್ ಇಂಜಿನ್ ಅಂತರ್ಜಾಲದಲ್ಲಿ ಸೆಪ್ಟೆಂಬರ್ 2007ರವರೆಗೆ 106.9 ಮಿಲಿಯನ್ ಬ್ಲಾಗ್‌ಗಳಿವೆ ಎಂದು ಲೆಕ್ಕಹಾಕಿದೆ. ಪ್ರತಿದಿನ 1 ಲಕ್ಷ 75 ಸಾವಿರ ಬ್ಲಾಗ್‌ಗಳು ರಚಿಸಲ್ಪಡುತ್ತವೆ ಮತ್ತು 160 ಲಕ್ಷ ಬ್ಲಾಗ್‌ಗಳು ಪ್ರತಿದಿನ ಒಂದಿಲ್ಲೊಂದು ಸುದ್ದಿಯನ್ನು ತನ್ನ ಹೊಟ್ಟೆಗೆ ಹಾಕಿಕೊಳ್ಳುತ್ತಿರುತ್ತವೆ ಎಂದೂ ಟೆಕ್ನೋರತಿ ತಿಳಿಸಿದೆ. ಬದಲಾಗುವ ರಾಜಕೀಯ ಬಣ್ಣಗಳು, ಆನ್‌ಲೈನ್ ಡೈರಿ, ಕಚ್ಚಾ ಸುದ್ದಿಯಿಂದ ಹಿಡಿದು ಥಳಕುಬಳುಕಿನ ಸಿನೆಮಾರಂಗದ ಗಾಸಿಪ್‌ವರೆಗೆ ಯಾವುದೂ ಬ್ಲಾಗಿಗಳಿಗೆ ವರ್ಜ್ಯವಲ್ಲ. ಪತ್ರಕರ್ತರಿಲ್ಲದ, ಪೆನ್ನು ಪೇಪರುಗಳಿಲ್ಲದ, ಮುದ್ರಣೆಯ ಕಿರಿಕಿರಿಯಿಲ್ಲದ ವೃತ್ತಪತ್ರಿಕೆ ಕಚೇರಿಯಂತಾಗಿದೆ ಬ್ಲಾಗ್‌ಲೋಕ. ಪ್ರತಿನಿಮಿಷಕ್ಕೊಮ್ಮೆ ಹುಟ್ಟುವ ರಸವತ್ತಾದ ಹೊಚ್ಚಹೊಸ ಸುದ್ದಿಗಳೇ ಬ್ಲಾಗ್‌ಗಳ ಜೀವಾಳ.

ಬ್ಲಾಗ್‌ಗಳೆಂದರೆ ಇಷ್ಟೇನಾ ಅಂದರೆ ನಿಮ್ಮ ಅಣತಿ ತಪ್ಪಾದೀತು. ಕೇವಲ ಹವ್ಯಾಸದಿಂದ ಹುಟ್ಟಿಕೊಂಡ ಬ್ಲಾಗ್‌ಗಳು ಈಗ ಹಣ ಸುರಿಸುವ ಇಂಡಸ್ಟ್ರಿಯಾಗಿವೆ. ಬ್ಲಾಗ್‌ನಲ್ಲಿ ಪ್ರಕಟಗೊಂಡ ಪ್ರತಿ ಅಕ್ಷರಗಳು ಅಕ್ಷರಪ್ರೀತಿಯನ್ನು ಹೆಚ್ಚಿಸಿವೆ ಚರ್ಚೆಗೆ ದಾರಿಮಾಡಿಕೊಟ್ಟಿವೆ. ಅತ್ಯಂತ ಸುಲಭವಾಗಿ ಪ್ರಕಟಿಸುವ ಮತ್ತು ಯಾವುದೇ ಭಿಡೆಯಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸುವ ಪ್ರಬಲ ಮಾಧ್ಯಮವಾಗಿ ಬ್ಲಾಗ್‌ಗಳು ಬದಲಾಗಿವೆ. ಬರೀ ಹತ್ತರೊಂದಿಗೆ ಹನ್ನೊಂದನೆಯವರಾಗದೆ ಲಕ್ಷಕ್ಕೊಂದು ವೆಬ್‌ಸೈಟ್ ಎಂಬ ಅಗ್ಗಳಿಗೆ ಪಾತ್ರವಾಗಿ ಜಾಗತಿಕವಾಗಿ ಗುರುತಿಸಿಕೊಂಡರೆ ಅಲ್ಪಕಾಲದಲ್ಲೇ ಹಣದ ಮಳೆಯನ್ನೇ ಸುರಿಸುವ ಅಕ್ಷಯಪಾತ್ರೆಯಾಗುವ ಸಾಧ್ಯತೆಯೂ ಇದೆ.

ಹಣದ ಹರಿವಿಗೆ ಪಾತಿ ಸಿಗಬೇಕಾದರೆ ಬ್ಲಾಗ್‌ನ್ನು ಓದುವ ಓದುಗರ ಸಂಖ್ಯೆಯೂ ಅತೀ ಮುಖ್ಯವಾದುದು. ಹೆಚ್ಚಿನ ಓದುಗರು ಬ್ಲಾಗ್ ಓದಬೇಕೆಂದರೆ ಸೋಷಿಯಲ್ ಬುಕ್‌ಮಾರ್ಕಿಂಗ್ ಸೈಟ್‌ಗಳಲ್ಲಿ ಲೇಖನಗಳನ್ನು ಪ್ರಕಟಿಸುವುದು ಅತಿ ಸುಲಭ ಮಾರ್ಗ. ಏಕರೀತಿಯ ವಿಚಾರವಾದಿಗಳ ಗುಂಪನ್ನು ರಚಿಸಿ ಲೇಖನವನ್ನು ಪ್ರಕಟಿಸಿದರೆ ಅದಕ್ಕೆ ವಾದ ವಿವಾದಗಳ ಕೊಂಡಿ ಬೆಸೆದು ವಿಸ್ತೃತ ಚರ್ಚೆಗೆ ದಾರಿಮಾಡಿಕೊಡುತ್ತದೆ. ಇದರಿಂದಾಗಿ, ಆ ಗುಂಪಿನ ಸದಸ್ಯರು ಮತ್ತೆ ಮತ್ತೆ ಚರ್ಚೆಗೆ ಬಂದು ಇತರರ ಅಭಿಪ್ರಾಯಗಳನ್ನು ಓದಲು ಅಥವ ತಮ್ಮ ಅಭಿಪ್ರಾಯಗಳನ್ನು ಮತ್ತೆ ಪ್ರಕಟಿಸಲು ಸಾಧ್ಯವಾಗುತ್ತದೆ.

ಇಂಥ ಸೋಷಿಯಲ್ ಬುಕ್‌ಮಾರ್ಕಿಂಗ್ ವೆಬ್‌ಸೈಟುಗಳಿಗೆ ಅಂತರ್ಜಾಲದಲ್ಲಿ ಕೊರತೆಯೇ? ಯಾವುದನ್ನು ಆಯುವುದು ಯಾವುದನ್ನು ಬಿಡುವುದು ಎಂಬ ಗೊಂದಲದಲ್ಲಿ ನೀವು ಬಿದ್ದೇ ಬೀಳುತ್ತೀರಿ! ನಿಮ್ಮ ಗೊಂದಲ ನಿವಾರಣೆಗೆ ಇರುವುದು ಒಂದೇ ದಾರಿ. ಅದೇನೆಂದರೆ, OneBookmarks.in. ಇದು ಭಾರತೀಯ ಭಾಷೆಗಳಲ್ಲಿ ಸೇವೆ ನೀಡುತ್ತಿರುವಂಥ ಪ್ರಪ್ರಥಮ ಬುಕ್‌ಮಾರ್ಕಿಂಗ್ ತಾಣ. ಇದು ಸದ್ಯಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬ್ಲಾಗಿಸಲು ಅನುವು ಮಾಡಿಕೊಟ್ಟಿದೆ.

ಒನ್‌ಬುಕ್‌ಮಾರ್ಕ್ಸ್ ಏಕೆ?

ಜಕ್ಸ್‌ಕನ್ಸಲ್ಟ್ ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ 300 ಲಕ್ಷಕ್ಕೂ ಹೆಚ್ಚಿನ ಇಂಟರ್‌ನೆಟ್ ಬಳಕೆದಾರರು ತಮ್ಮ ಮಾತೃಭಾಷೆಯಲ್ಲಿ ಸುದ್ದಿಸಾರವನ್ನು ಓದಲು ಆಸಕ್ತಿ ತೋರುತ್ತಿದ್ದಾರೆ. ಅದಲ್ಲದೆ, 2010ರ ಹೊತ್ತಿಗೆ ಭಾರತದ ಒಂದು ಲಕ್ಷ ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್ ಮುಖಾಂತರ ಸಂಪರ್ಕ ಸಾಧಿಸುವ ಗುರಿಯನ್ನು ಟೆಲಿಕಮ್ಯುನಿಕೇಷನ್ಸ್ ಇಲಾಖೆ ಹೊಂದಿದೆ. .ಇನ್ ರಿಜಿಸ್ಟ್ರೇಷನ್ ಈಗಾಗಲೆ ಎರಡು ಲಕ್ಷ ಗಡಿಯನ್ನು ದಾಟಿಬಿಟ್ಟಿದೆ. ಈ ಅಂಕಿಅಂಶಗಳು ಭಾರತದ ಹಳ್ಳಿಗಳಲ್ಲಿ ಹೆಚ್ಚಾಗುತ್ತಿರುವ ಇಂಟರ್‌ನೆಟ್ ಭಾಷಾಪ್ರೇಮವನ್ನು ಜಗಜ್ಜಾಹೀರಾತು ಮಾಡಿವೆ. ಓದುಗರಿಗೆ ಏನು ಬೇಕೋ ಅದನ್ನು ನೀಡುವುದೇ ಜಾಣತನದ ಲಕ್ಷಣವಲ್ಲವೆ? ಇನ್ನೇಕೆ ತಡ. ನಿಮ್ಮ ಲೇಖನಗಳನ್ನು ಇಂಗ್ಲಿಷಿನ ಜೊತೆ ನೀವಾಡುವ ಭಾಷೆಯಲ್ಲಿಯೂ ಪ್ರಕಟಿಸಿ ಆದಾಯ ಹೆಚ್ಚಿಸಿಕೊಳ್ಳಿ.

ಒನ್‌ಬುಕ್‌ಮಾರ್ಕ್ಸ್‌ನಲ್ಲಿರುವ ಮತ್ತೊಂದು ವಿಶೇಷತೆಯೆಂದರೆ, ಫೋನೆಟಿಕ್ ಅಥವ ಇನ್‌ಸ್ಕ್ರಿಪ್ಟ್ ಕೀಬೋರ್ಡ್ ಸಹಾಯದಿಂದ ಇಂಗ್ಲಿಷ್ ಅಥವ ಯುನಿಕೋಡ್‌ನಲ್ಲಿ ಪ್ರಾದೇಶಿಕ ಭಾಷೆ ಬಳಸಿ ಪ್ರಕಟಿಸಿದ ಲೇಖನದ ಕೊಂಡಿಯ ಜೊತೆಗೆ ಸೂಕ್ತ ಅಡಿವಿವರಣೆಯನ್ನೂ ದಾಖಲಿಸಬಹುದು.

ಭಾರತ, ಭಾರತೀಯತೆ ಮತ್ತು ಭಾರತೀಯ ಭಾಷೆಗೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸಲು ಅನುವು ಮಾಡುವ ಉದ್ದೇಶದಿಂದಲೇ ಒನ್‌ಬುಕ್‌ಮಾರ್ಕ್ಸ್.ಇನ್ ಸೋಷಿಯಲ್ ಬುಕ್‌ಮಾರ್ಕಿಂಗ್ ಸೈಟ್ ಪ್ರಾರಂಭವಾಗಿದೆ. ಭಾರತಕ್ಕೆ ಸಂಬಂಧಿಸಿದ ಯಾವುದೇ ಬರಹಗಳಿಗೆ ಇಲ್ಲಿ ಸ್ವಾಗತವಿದೆ. ಭಾರತದಲ್ಲಿ ನಡೆಯುತ್ತಿರುವ ಪ್ರತಿ ಸಣ್ಣ ಘಟನೆಗಳನ್ನು, ವಿವರಗಳನ್ನು ತಿಳಿದುಕೊಳ್ಳಲು ಅನಿವಾಸಿ ಭಾರತೀಯರು ಎಂದೂ ತುದಿಗಾಲಲ್ಲಿ ನಿಂತಿರುತ್ತಾರೆ. ರಾಜಕೀಯದ ಸುದ್ದಿಗಳೇ ಆಗಲಿ ಅಥವ ತಾವು ಹುಟ್ಟಿಬೆಳೆದ ಸಣ್ಣಹಳ್ಳಿಯ ಹೈದನೊಬ್ಬ ಭಯೋತ್ಪಾದಕರ ವಿರುದ್ಧ ವಿರಾವೇಶದಿಂದ ಹೋರಾಡಿದ ಸುದ್ದಿಯೇ ಆಗಲಿ ಎಂದಿಗೂ ಆಪ್ತವೇ. ಒನ್‌ಬುಕ್‌ಮಾರ್ಕ್ಸ್.ಇನ್ ಈಗಾಗಲೆ 250ಕ್ಕೂ ಹೆಚ್ಚಿನ ಟ್ಯಾಗ್‌ಗಳನ್ನು ತನ್ನ ಮಡಿಲಲ್ಲಿ ಸೇರಿಸಿಕೊಂಡಿದೆ. ಇದಲ್ಲದೆ, ಒನ್‌ಇಂಡಿಯಾ.ಇನ್ 90 ಮಿಲಿಯನ್‌ಗೂ ಹೆಚ್ಚಿನ ಪುಟನೋಟಗಳನ್ನು ಪ್ರತಿತಿಂಗಳು ದಾಖಲಿಸುತ್ತಿದ್ದು, ನಿಮ್ಮ ಬ್ಲಾಗ್‌ಗಳಿಗೆ ಟ್ರಾಫಿಕ್‌ನ್ನು ತಿರುಗಿಸಲು ಸಹಕಾರಿಯಾಗುತ್ತದೆ.

ಇನ್ನು ತಡವೇಕೆ? ನಿಮ್ಮ ಇಂಗ್ಲಿಷ ಮತ್ತು ಪ್ರಾದೇಶಿಕ ಭಾಷೆಗಳಲ್ಲಿರುವ ಬ್ಲಾಗ್‌ಗಳನ್ನು ಒನ್‌ಬುಕ್‌ಮಾರ್ಕ್ಸ್‌ನಲ್ಲಿ ದಾಖಲಿಸಲು ಪ್ರಾರಂಭಿಸಿ ಮತ್ತು ನಿಮ್ಮ ಬ್ಲಾಗ್‌ಗಳಿಗೆ ಓದುಗರ ಹರಿವನ್ನು ಹೆಚ್ಚಿಸಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X