• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ಟ್ರೇಲಿಯಾದೆದುರು ಹೈದರಾಬಾದಲ್ಲೂ ಮುಗ್ಗರಿಸಿತು ಭಾರತ

By Staff
|

ಹೈದರಾಬಾದ್, ಅ.5 : ಹೈದರಾಬಾದ್‌ನ ಉಪ್ಪಲ್‌ನಲ್ಲಿ ಶುಕ್ರವಾರ (ಅ.5) ಪ್ರಾರಂಭವಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೆಯ ಮ್ಯಾಚ್‌ನಲ್ಲಿ 47ರನ್‌ಗಳ ಅಂತರದಿಂದ ಆಸ್ಟ್ರೇಲಿಯಾ ಜಯಸಾಧಿಸಿದೆ. 45ಸಾವಿರ ಪ್ರೇಕ್ಷಕರಿಂದ ತುಂಬಿದ್ದ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಆಟಗಾರರು ನಿರಾಸೆ ಮೂಡಿಸಿದರು.

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗನ್ನು ಆಯ್ಕೆ ಮಾಡಿಕೊಂಡಿತು. ಆಂಡ್ರೂ ಸಿಮಂಡ್ 67 ಎಸೆತಗಳಲ್ಲಿ ಪಡೆದ 89 ರನ್‌ಗಳ ಉತ್ತಮ ಸ್ಕೋರ್, ಆಸ್ಟ್ರೇಲಿಯಾ ಪಾಲಿಗೆ ವರವಾಯಿತು. ಹೈಡೆನ್‌ರ 60, ಮೈಕೆಲ್ ಕ್ಲಾರ್ಕ್‌ರ 59 ರನ್‌ಗಳ ಉತ್ತಮ ಮೊತ್ತ, ಆಸ್ಟ್ರೇಲಿಯಾ 290 ರನ್ ಗಳಿಸಲು ಸಹಕಾರಿಯಾಯಿತು. ಶ್ರೀಶಾಂತ್, ಜಹೀರ್ ಖಾನ್ ಹಾಗೂ ಪಠಾಣ್ ತಲಾ ಎರಡು ವಿಕೆಟ್‌ಗಳನ್ನು , ಯುವರಾಜ್ ಸಿಂಗ್ ಒಂದು ವಿಕೆಟ್ ಗಳಿಸಿದರು. ಆರಂಭದ ಬ್ಯಾಟ್ಸ್‌ಮನ್‌ಗಳಾದ ಗಿಲ್‌ಕ್ರಿಸ್ಟ್ ಮತ್ತು ಮ್ಯಾಥ್ಯೂ ಹೇಡನ್ ತಂಡ ಉತ್ತಮ ಮೊತ್ತ ಗಳಿಸಲು ಅಡಿಪಾಯ ಹಾಕಿಕೊಟ್ಟರು. ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 290 ರನ್‌ಗಳ ಭಾರಿ ಮೊತ್ತವನ್ನು ಭಾರತದ ಮುಂದಿಟ್ಟಿತು.

ಭಾರತದ ಆರಂಭದ ಬ್ಯಾಟ್ಸ್‌ಮನ್‌ಗಳು ಎಡವಿದ್ದರಿಂದ 47.4 ಓವರ್‌ಗಳಲ್ಲೇ ತನ್ನ ಎಲ್ಲ ವಿಕೆಟ್‌ಗಳನ್ನೂ ಟೀಮ್ ಇಂಡಿಯಾ ಕಳೆದುಕೊಂಡಿತು. ಗೌತಮ್ ಗಂಭೀರ್ 6 ರನ್‌ಗಳನ್ನು ಗಳಿಸಿ ಪೆವಿಲಿಯನ್‌ಗೆ ಹಿಂತಿರುಗಿದರು. ತೆಂಡೂಲ್ಕರ್ ಕ್ರೀಸ್‌ನಲ್ಲಿ ಸ್ವಲ್ಪ ಹೊತ್ತು ನಿಂತನಾದರೂ 71 ಬಾಲ್‌ಗಳಿಗೆ ಕೇವಲ 43ರನ್‌ಗಳನ್ನು ಕಲೆಹಾಕಿದನು.

ಯುವರಾಜ್ ಸಿಂಗ್‌ ಗಳಿಸಿದ ಅದ್ಭುತ 121 ರನ್‌ಗಳು ಭಾರತ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಇನ್ನುಳಿದಂತೆ ಧೋನಿ 33 ರನ್‌ಗಳನ್ನು ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್‌ಮನ್‌ಗಳು ಆಯಾರಾಮ್ ಗಯಾರಾಮ್‌ನಂತೆ ಪೆವಿಲಿಯನ್‌ಗೆ ಮುಖ ಮಾಡಿದರು. ಭಾರತ ತನ್ನ ಎಲ್ಲ ವಿಕೆಟ್‌ಗಳ ನಷ್ಟಕ್ಕೆ 243 ರನ್‌ ಗಳಿಸಿ ಮೂರನೆ ಏಕ ದಿನ ಪಂದ್ಯದಲ್ಲೂ ಸೋತಿತು. ಒಟ್ಟು ಏಳು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಆಸ್ಟ್ರೇಲಿಯಾ ಮುಂದಿದೆ.

(ದಟ್ಸ್‌ಕ್ರಿಕೆಟ್ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X