ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5ನಿಮಿಷದಿ 1ಶತಕೋಟಿ ಡಾಲರ್ ಸಾಲ ಕೊಟ್ಟ ಎಸ್ ಬಿಐ!

By Staff
|
Google Oneindia Kannada News

ನವದೆಹಲಿ, ಅ.3 : ಪ್ರಪಂಚದ ಯಾವ ಬ್ಯಾಂಕು ಮಾಡದ ಸಾಧನೆಯನ್ನು ತಾನು ಮಾಡಿದ್ದೇನೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೊಂಡಿದೆ. ಕೇವಲ 5 ನಿಮಿಷಗಳಲ್ಲಿ ಒಂದು ಶತಕೋಟಿ ಡಾಲರ್‌ಗಳನ್ನು ಟಾಟಾ ಸಂಸ್ಥೆಗೆ ಅದು ಸಾಲವಾಗಿ ಕೊಟ್ಟಿದೆ.

ಟಾಟಾ-ಕೋರಸ್‌ ಈ ಮೊತ್ತದ ಸಾಲಕ್ಕಾಗಿ ಸುಮಾರು ಕಡೆ ಪ್ರಯತ್ನಿಸಿತು. ಆದರೆ ನಾವು ಅವರಿಗೆ ಬೇಕಾಗಿದ್ದ ಒಂದು ಶತಕೋಟಿ ಡಾಲರ್ ಸಾಲವನ್ನು ಕೇವಲ 5 ನಿಮಿಷದಲ್ಲಿ ಕೊಟ್ಟಿದ್ದೇವೆ. ಇದು ಎಸ್‌ಬಿಐನ ಶೀಘ್ರ ವಿಲೇವಾರಿಗೆ ಒಂದು ನಿದರ್ಶನ ಎಂದು ಎಸ್‌ಬಿಐನ ಅಧ್ಯಕ್ಷರಾದ ಓ.ಪಿ. ಭಟ್ ತಿಳಿಸಿದ್ದಾರೆ.

ತಮಗೆ ಪ್ರತಿಸ್ಪರ್ಧಿಯಾಗಿ ಬರುತ್ತಿರುವ ಖಾಸಗಿ ಬ್ಯಾಂಕ್‌ಗಳ ಕುರಿತು ಕೇಳಿದಾಗ, ಐಸಿಐಸಿಐ ಬ್ಯಾಂಕ್ ನಮಗೆ ಪ್ರತಿಸ್ಪರ್ಧಿಯಲ್ಲ. ಈಗಾಗಲೇ ಎಲ್ಲ ಬ್ಯಾಂಕ್‌ಗಳಿಗಿಂತಲೂ ನಾವೂ ಮುಂದಿದ್ದೇವೆ ಎಂದು ಭಟ್ ಪ್ರತಿಕ್ರಿಯಿಸಿದರು. ವಿದೇಶಿ ಗೃಹ ಸಾಲ ನೀಡಿಕೆಯಲ್ಲೂ ಎಸ್‌ಬಿಐ ಮುಂದಿದೆ. 2007ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ವಹಿವಾಟಿನಲ್ಲೂ ಮುಂದಿದ್ದೇವೆ ಎಂದು ಎಸ್‌ಬಿಐ ತಿಳಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X