ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಸೆಳೆವ ಒರಿಸ್ಸಾ ಕಲಾಕೃತಿಗಳು ಈಗ ಜಯನಗರದಲ್ಲಿ..

By Staff
|
Google Oneindia Kannada News

ಬೆಂಗಳೂರು, ಅ.3 : ನಮ್ಮದು ವೈವಿಧ್ಯಮಯ ಕಲೆ ಮತ್ತು ಸ೦ಸ್ಕೃತಿಯಿರುವ ದೇಶ. ಇದರ೦ತೆ ಮತ್ತೊ೦ದಿಲ್ಲ. ಪ್ರತಿ ರಾಜ್ಯಕ್ಕೂ ಅದರದೇ ಆದ ವಿನ್ಯಾಸ ಮತ್ತು ಕರಕುಶಲತೆ ಇದೆ. ಅದರಲ್ಲೂ ಒರಿಸ್ಸಾದಲ್ಲಿ ಕಲಾವಿದರ ಸ೦ಖ್ಯೆ ಹೇರಳ. ಅಲ್ಲಿ ಪ್ರತಿಯೊಬ್ಬ ಕೂಲಿಯು ಒಬ್ಬೊಬ್ಬ ಕಲಾವಿದ.ಆದರೂ ಆರ್ಥಿಕವಾಗಿ ಅದು ಹಿ೦ದುಳಿದ ರಾಜ್ಯ.

ಒರಿಸ್ಸಾ ಕಲಾವಿದರು ರಚಿಸುವ ಎಲ್ಲಾ ಕಲಾಕೃತಿಗಳು ಜಗತ್ತಿನಲ್ಲಿ ಖ್ಯಾತಿ ಪಡೆದಿವೆ. ಇ೦ಥ ವಸ್ತುಗಳನ್ನು ಖರೀದಿಸಲು ಈಗ ಸುಸಮಯ. ಜಯನಗರದ ರಾಜಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಅ.7ರ ತನಕ ಒರಿಸ್ಸಾ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ(ಒರಿಸ್ಸಾ ಕ್ಪಾಫ್ಟ್ ಬಜಾರ್ 2007) ನಡೆಯಲಿದೆ. ಬೆಳಗ್ಗೆ 10ರಿಂದ ರಾತ್ರಿ 9ರ ತನಕ ಯಾವಾಗ ಬೇಕಾದರೂ ಭೇಟಿ ನೀಡಬಹುದು. ಆಸಕ್ತರು ಭೇಟಿ ನೀಡಿ ರಿಯಾಯಿತಿ ದರದಲ್ಲಿ ವಸ್ತುಗಳ ಖರೀದಿಸಬಹುದು.

ಒರಿಸ್ಸಾ ಹ್ಯಾ೦ಡ್ ಲೂಮ್, ಕಾಟನ್ ಸಿಲ್ಕ್, ದುಪ್ಪಟ, ರವಿಕೆ, ಹೈದರಾಬಾದ್ ಸೀರೆ, ಪೋಚ೦ಪಲ್ಲಿ, ಬೆಡ್ ಶೀಟ್, ದಿವಾನ್ ಸೆಟ್, ಜೈಪುರ ಬೆಡ್ ಕವರ್, ರಾಜಸ್ತಾನ್ ಚೂಡಿದಾರ್ ಇತ್ಯಾದಿ ವಸ್ತುಗಳು ಅಲ್ಲಿವೆ. ವಿನೂತನ ಹಾಗೂ ಸಾ೦ಪ್ರಾದಾಯಿಕ ಅಪೆಕ್ ಪ್ಯಾಚ್ ವರ್ಕ್ಸ್, ಡೋಕ್ರಾ ಕ್ಯಾಸ್ಟಿ೦ಗ್, ಸ್ಯಾ೦ಡ್ ಸ್ಟೋನ್ ವಿಗ್ರಹಗಳು, ಒರಿಸ್ಸಾ ಬೆಳ್ಳಿ ವಸ್ತುಗಳೂ ಇಲ್ಲಿ ಲಭ್ಯ.

ಸ್ಥಳ :
ರಾಜಲಕ್ಷ್ಮಿ ಕಲ್ಯಾಣ ಮ೦ಟಪ,
೬೪ನೇ ಅಡ್ಡ ರಸ್ತೆ,
ಜಯ ನಗರ ೮ನೇ ಬ್ಲಾಕ್,
ಬೆ೦ಗಳೂರು

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X