ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಎರಡು ವಾರ ಈರುಳ್ಳಿ ಕಂಡಾಗಲೆಲ್ಲ ತಪ್ಪದು ಕಣ್ಣೀರು!

By Staff
|
Google Oneindia Kannada News

ನವದೆಹಲಿ, ಅ.3 : ಈರುಳ್ಳಿ ಬೆಲೆ ದಿನೇದಿನೇ ಹೆಚ್ಚುತ್ತಿರುವ ಪರಿಣಾಮ, ಕೇಂದ್ರ ಸರ್ಕಾರ ಈರುಳ್ಳಿ ರಫ್ತು ವಹಿವಾಟನ್ನು ತಾತ್ಕಾಲಿಕವಾಗಿ 15ದಿನಗಳ ಕಾಲ ಸ್ಥಗಿತಗೊಳಿಸಿದೆ. ಹೀಗಾಗಿ ಇನ್ನೆರಡು ವಾರದಲ್ಲಿ ಈರುಳ್ಳಿ ದರ ಕಡಿಮೆಯಾಗಲಿದೆ.

ಸಗಟು ಮಾರಾಟ ಮಳಿಗೆಗಳಲ್ಲಿ ಒಂದು ಕೆ.ಜಿ. ಈರುಳ್ಳಿ ಬೆಲೆ 25ರಿಂದ 30ರೂ.ವರೆಗೂ ಇದೆ. ಗ್ರಾಹಕರ ಬೇಡಿಕೆ ಕೂಡ ಹೆಚ್ಚಾಗುತ್ತಿದ್ದು, ಕಳೆದ ವಾರಕ್ಕಿಂತ ಈ ವಾರ ಈರುಳ್ಳಿ ಬೆಲೆ ಶೇ.25ರ ಏರಿಕೆ ಕಂಡಿದೆ.

ಇನ್ನು ಎರಡು ವಾರಗಳಲ್ಲಿ ಹೆಚ್ಚಿನ ಈರುಳ್ಳಿ ಇಳುವರಿಯನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರದ ನಾಸಿಕ್ ನಿಂದ ನಿರೀಕ್ಷಿಸಲಾಗಿದೆ. ಈರುಳ್ಳಿ ರಫ್ತು ದರ ಪ್ರತಿ ಟನ್ನಿಗೆ 50ಡಾಲರ್ ಹೆಚ್ಚಳವಾದ ಪರಿಣಾಮ ರಫ್ತು ವಹಿವಾಟು ನಿಲ್ಲಿಸುವ ಕ್ರಮ ಕೈಗೊಳ್ಳಲಾಗಿದೆ. ಇನ್ನು ಹದಿನೈದು ದಿನಗಳಲ್ಲಿ ಈರುಳ್ಳಿ ಬೆಲೆ ಇಳಿಕೆಯಾಗುವ ಸಂಭವವಿದೆ ಎಂದು ಆಗ್ರೋ ಮಾರುಕಟ್ಟೆ ವಕ್ತಾರರು ಹೇಳಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X