ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಧರ್ ಸಂಪಾದಕತ್ವದ ಇಂಗ್ಲಿಷ್ 'ಅಗ್ನಿ' ಮಾರುಕಟ್ಟೆಗೆ

By Staff
|
Google Oneindia Kannada News

ಬೆಂಗಳೂರು, ಅ.3 : 'ಇದು ಪತ್ರಿಕೆಯಲ್ಲ ಪ್ರತಿಭಟನೆಯ ಅಸ್ತ್ರ'ಎಂಬ ಅಡಿ ಬರಹವುಳ್ಳ'ಅಗ್ನಿ'ವಾರಪತ್ರಿಕೆಯನ್ನು ನಡೆಸುತ್ತಿರುವ ಶ್ರೀಧರ್, ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ಅಗ್ನಿ ಸಂಪಾದಕತ್ವವನ್ನು ತ್ಯಜಿಸಿ, ಅದನ್ನು ಬಸವರಾಜುಗೆ ಒಪ್ಪಿಸಿ ತಮ್ಮನ್ನು ಸಂಪೂರ್ಣವಾಗಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದ ಶ್ರೀಧರ್ ಕ್ರಿಯಾಶೀಲತೆ ಹಾಗೂ ಸೃಜನಶೀಲ ಸಾಮರ್ಥ್ಯಕ್ಕೆ ಅವರ ಆಯ್ಕೆಯ ಸಿನಿಮಾ ಕ್ಷೇತ್ರವೂ ಸಾಲದು ಎನಿಸುತ್ತದೆ. ಈಗ ಇಂಗ್ಲಿಷ್ 'ಅಗ್ನಿ'ಪತ್ರಿಕೆಯನ್ನು ರೂಪಿಸಲು ಅವರು ಮುಂದಾಗಿದ್ದಾರೆ.

ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ 'ಅಗ್ನಿ', ಕನ್ನಡ 'ಅಗ್ನಿ'ಯ ನಕಲಲ್ಲ. ಶ್ರೀಧರ್ ಅವರ ಸಂಪಾದಕತ್ವದಲ್ಲಿ ಶೀಘ್ರದಲ್ಲೆ ಮಾರುಕಟ್ಟೆಯಲ್ಲಿ ಇಂಗ್ಲಿಷ್ ಅಗ್ನಿ ಲಭ್ಯವಾಗಲಿದೆ. ಇದು ಸ್ವತಂತ್ರ ಹಾಗೂ ಪ್ರತ್ಯೇಕ ಅಸ್ತಿತ್ವ ಹೊಂದಿರುತ್ತದೆ ಎಂದು ಪತ್ರಿಕೆ ಹೇಳಿಕೊಂಡಿದೆ.

ಅಗ್ನಿಯನ್ನು ವಿಶ್ವಾಸಾರ್ಹ ಪತ್ರಿಕೆಯನ್ನಾಗಿ ರೂಪಿಸುವಲ್ಲಿ ಶ್ರೀಧರ್ ಅವರ ಶ್ರಮ ಅಪಾರ. ಇಂಗ್ಲಿಷ್ ಸಾಹಿತ್ಯವನ್ನು ಗಾಢ ಶ್ರದ್ಧೆಯೊಂದಿಗೆ
ಓದಿರುವ ಅವರು, ಎಲ್ಲವನ್ನೂ ತಲಸ್ಪರ್ಶಿಯಾಗಿ ತಿಳಿದುಕೊಳ್ಳುವ ಸ್ವಭಾವದವರು. ಮಾಂತ್ರಿಕ ಲೋಕ ಸೇರಿದಂತೆ ಹಲವು ಜ್ಞಾನ ಶಾಖೆಗಳ
ಕುರಿತು ಆಳವಾದ ಜ್ಞಾನ ಪಡೆದವರು. ಹೀಗಾಗಿ ಹೊಸ ಅಗ್ನಿ ಬಗ್ಗೆ ನಿರೀಕ್ಷೆಗಳು ಸಹಜ ಎನ್ನುತ್ತಾರೆ ಶ್ರೀಧರ್ ಅಭಿಮಾನಿಗಳು.

ಇತ್ತೀಚೆಗಷ್ಟೇ 'ಅಗ್ನಿ"ಯ ಸಂಪಾದಕ ಸ್ಥಾನದಿಂದ ಬಸವಾರಾಜು ಅವರನ್ನು ಬದಲಿಸಿ, ರಾಜಶೇಖರ ಹತಗುಂದಿಯನ್ನು ಆ ಸ್ಥಾನಕ್ಕೆ ತರಲಾಗಿದೆ. ಸದ್ಯದ ಕನ್ನಡ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದಲ್ಲಿ ಹತ್ತಾರು ಪತ್ರಿಕೆಗಳಿವೆ. ದಿನಕ್ಕೊಂದು ಪತ್ರಿಕೆ ಹುಟ್ಟುತ್ತಿದೆ. ಹಾಯ್ ಬೆಂಗಳೂರು, ಲಂಕೇಶ್, ಅಗ್ನಿ, ಇತ್ತೀಚೆಗಿನ ಕನ್ನಡ ಟೈಮ್ಸ್ ಸೇರಿದಂತೆ ಕೆಲವೇ ಕೆಲವು ಪತ್ರಿಕೆಗಳಷ್ಟೇ ಲೆಕ್ಕದಲ್ಲಿ ಉಳಿದಿವೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X