ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಲ್ಲ ಮೆಲ್ಲನೆ ಬಂದು ಪಾಂಟಿಂಗ್ ಕೆನ್ನೆಗೆ ಪಪ್ಪಿ ಕೊಟ್ಟು

By Staff
|
Google Oneindia Kannada News

ಬೆಂಗಳೂರು, ಸೆ.28 : ಆಸ್ಟ್ರೇಲಿಯಾದಂಥ ರಾಷ್ಟ್ರದಲ್ಲಿ ಹೀಗಾಗುತ್ತದೋ ಇಲ್ಲವೊ. ಭಾರತದಲ್ಲಂತೂ ಆಗುತ್ತದೆ. ಇಟ್ ಹ್ಯಾಪನ್ಸ್ ಓನ್ಲಿ ಇನ್ ಇಂಡಿಯಾ.

ಹರಾಜು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಆಸೀಸ್ ನಾಯಕ ರಿಕಿ ಪಾಂಟಿಂಗ್‌ಗೆ ಸಿಕ್ಕಿದ್ದು ಬಲವಂತದ ಸಿಹಿಸಿಹಿ ಮುತ್ತು. ಆ ಮುತ್ತು ಸಿಕ್ಕಿದ್ದು ಪಕ್ಕದಲ್ಲಿಯೇ ಇದ್ದ ಚೆಂದುಳ್ಳಿ ಚೆಲುವೆ ಮಂದಿರಾ ಬೇಡಿಯಿಂದಂತೂ ಖಂಡಿತ ಅಲ್ಲ.

ಬಡಮಕ್ಕಳಿಗಾಗಿ ನಿಧಿ ಎತ್ತಲು ಆಯೋಜಿಸಲಾಗಿದ್ದ ಹರಾಜಿನಲ್ಲಿ ಭಾಗವಹಿಸಲು ಬಂದಿದ್ದ ರಿಕಿಗೆ ಆಶ್ಚರ್ಯ ಕಾದಿತ್ತು. ಹತ್ತು ಸಾವಿರ ರುಪಾಯಿ ಚಿತ್ರವೊಂದನ್ನು ಹರಾಜಿನಲ್ಲಿ ಖರೀದಿಸಿದ ಐವತ್ತರ ವ್ಯಕ್ತಿಯೊಬ್ಬ ರಿಕಿಯನ್ನು ಅಪ್ಪಿಕೊಂಡು ಗಲ್ಲಕ್ಕೆ ಮುತ್ತು ಕೊಟ್ಟು ಕಿರಿಕಿರಿ ಮಾಡಿದ.

ತಕ್ಷಣವೇ ಸಾವರಿಸಿಕೊಂಡ ರಿಕಿ ಹಿಂದೆ ಸರಿದು ಹೆಚ್ಚಿನ ಮುಜುಗರವನ್ನು ತಪ್ಪಿಸಿದರು. ಕೊನೆಗೆ ಆ ಪಾನಮತ್ತ ವ್ಯಕ್ತಿಗೆ ಮರೂನ್ ಅಂಗಿಯನ್ನು ನೀಡಿದರು.

ಹರಾಜಿನಲ್ಲಿ ಅನೇಕ ಛಾಯಾಚಿತ್ರಗಳನ್ನು ಮತ್ತು ರಿಕಿ ಪಾಂಟಿಂಗ್ ಸೆಂಚುರಿ ಬಾರಿಸಿದ ಬ್ಯಾಟನ್ನೂ ಹರಾಜು ಮಾಡಲಾಯಿತು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X