ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನ್ನು ಧ್ವಂಸಗೊಳಿಸಿದ ಧೋನಿ ಪಡೆಯನ್ನು ಸ್ಫೋಟಿಸಲು ಸಂಚು?-

By Staff
|
Google Oneindia Kannada News

ಮುಂಬೈ, ಸೆ.26 : ಟ್ವೆಂಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ವಿಧ್ವಂಸಗೊಳಿಸಿದ ಸ್ಫೋಟಕ ಧೋನಿ ಪಡೆಯನ್ನೇ ಸ್ಫೋಟಿಸಲು ಸಂಚು ನಡೆದಿತ್ತೇ?

ವಿಜಯಿಯಾಗಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿರುವ ಭಾರತ ಕ್ರಿಕೆಟ್ ತಂಡಕ್ಕೆ ಭವ್ಯ ಸ್ವಾಗತ ನೀಡಲು ಲಕ್ಷಾಂತರ ಜನ ನೆರೆದಿದ್ದ ಅಂಧೇರಿ ಸ್ಟೇಷನ್ ಬಳಿ ನಾಲ್ಕು ಬಾಂಬ್‌ಗಳು ಪತ್ತೆಯಾಗಿವೆ.

ಒಂದೆಡೆ ಗಣೇಶ ವಿಸರ್ಜನೆಗೆ ನೆರೆದಿದ್ದ ಜನಸ್ತೋಮ ಮತ್ತೊಂದೆಡೆ ಪಾಕಿಗಳನ್ನು ಐದು ರನ್ನಿನಿಂದ ಸೋಲಿಸಿದ ಹೀರೋಗಳನ್ನು ಸ್ವಾಗತಿಸಲು ಬಂದ ಜನರ ನೂಕು ನುಗ್ಗಲು. ಜುಲೈ 11 2006ರಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟಗಳ ನೆನಪು ಹಸಿರಾಗಿರುವಂತೆಯೇ ಮತ್ತೆ ನಾಲ್ಕು ಬಾಂಬ್‌ಗಳು ಪತ್ತೆಯಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣ ಮಾಡಿತ್ತು.

ಆದರೆ ಯಾವುದೇ ಅವಘಡ ಸಂಭವಿಸದಂತೆ ತಡೆಯಲು ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಧೋಧೋ ಮಳೆ ಸುರಿಯುತ್ತಿದ್ದರೂ ಧೋನಿ ಪಡೆಯನ್ನು ಸ್ವಾಗತಿಸಲು ಜನರಲ್ಲಿ ಉತ್ಸಾಹ ಬತ್ತಿರಲಿಲ್ಲ. ಇಪ್ಪತ್ನಾಲ್ಕು ವರ್ಷಗಳ ಬಳಿಕ ವಿಶ್ವಕಪ್ಪನ್ನು ಮನೆಗೆ ತಂದಿರುವ ಮಹೇಂದ್ರ ಸಿಂಗ್ ಧೋನಿ ತಂಡವನ್ನು ತೆರೆದ ಮೇಲ್ಮೈ 'ವಿಜಯ್ ರಥ್' ಬಸ್ಸಿನಲ್ಲಿ ಮೂವತ್ತು ಕಿ.ಮೀ. ದೂರದಷ್ಟು ಮೆರವಣಿಗೆಯಲ್ಲಿ ಕರೆತರಲಾಯಿತು. ದಾರಿಯುದ್ದಕ್ಕೂ ಸಾವಿರಾರು ಜನ ನೆರೆದಿದ್ದರಿಂದ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್, ಬಿಸಿಸಿಐ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಅನೇಕ ಗಣ್ಯರು ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತ ತಂಡವನ್ನು ಬರಮಾಡಿಕೊಂಡರು.

ಭಾರತ ಕ್ರಿಕೆಟ್ ತಂಡವನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಸನ್ಮಾನಿಸಲಾಗುತ್ತಿದೆ.

(ಯುಎನ್ಐ)

ಟೀಮ್ ಇಂಡಿಯಾದ ಕಾಲು ನೆಲದ ಮೇಲೆಯೇ ಇರಲಿ..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X