ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗರ ಕಣ್ಣಿನ ಬಲೆಗೆ ಬಿದ್ದ ಚಿತ್ತಚೋರ ಮೀನುಗಳು

By Staff
|
Google Oneindia Kannada News

ಬೆಂಗಳೂರು, ಸೆ.26 : ನಗರ ಸಮೀಪದ ಹೆಸರಘಟ್ಟ ಬಳಿ 'ಅಕ್ವಾ ಪಾರ್ಕ್"ನ್ನು ಸ್ಥಾಪಿಸಲು ಮೀನುಗಾರಿಕಾ ಇಲಾಖೆ ಉದ್ದೇಶಿಸಿದೆ. ಯೋಜನೆ ಪೂರ್ಣಗೊಂಡರೆ, ಅಲ್ಲಿ ಬಣ್ಣಬಣ್ಣದ ಚಿತ್ತಾಕರ್ಷಕ ಅಲಂಕಾರಿಕ ಮೀನುಗಳನ್ನು ನೋಡುತ್ತಾ ಕಣ್ತುಂಬಿಕೊಳ್ಳಬಹುದು.

ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಮಾರಾಟಕ್ಕಾಗಿ ತಲಾ ಒಂದು ಎಕರೆ ಪ್ರದೇಶವನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗುವುದು. ಗುತ್ತಿಗೆದಾರರು ಬೇಡಿಕೆಗೆ ತಕ್ಕಂತೆ ಅಲಂಕಾರಿಕ ಮೀನು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದ್ದಾರೆ ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಎನ್.ಆರ್.ರಾಮಕೃಷ್ಣ ತಿಳಿಸಿದ್ದಾರೆ.

1.50ಕೋಟಿ ರೂ.ವೆಚ್ಚದಲ್ಲಿ ಸಕಲ ಸೌಲಭ್ಯಗಳನ್ನೂ ಅಲ್ಲಿ ಕಲ್ಪಿಸಲಾಗುವುದು. ಉತ್ತಮ ರಸ್ತೆ, ನೀರಿನ ಪೂರೈಕೆ, ಪ್ರಯೋಗಾಲಯ, ಕ್ಯಾಂಟೀನ್ ಸೌಲಭ್ಯ ಮಾಹಿತಿ ಕೇಂದ್ರ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಇಲಾಖೆ ಒದಗಿಸಲಿದೆ ಎಂದು ರಾಮಕೃಷ್ಣ ಸುದ್ದಿಗಾರರಿಗೆ ವಿವರಿಸಿದರು.

ಚಿತ್ತಾಕರ್ಷಕ ಮೀನಿನ ಕತೆ : ಅಲಂಕಾರಿಕ ಮೀನುಗಳಿಗೆ ದೇಶದಲ್ಲಿ ಭಾರಿ ಬೇಡಿಕೆ ಇದೆ. ಸಿಂಗಪುರ, ಥೈಲ್ಯಾಂಡ್, ಮಲೇಶ್ಯಾ, ಫಿಲಿಫೈನ್ಸ್, ಶ್ರೀಲಂಕಾ, ತೈವಾನ್, ಇಂಡೋನೇಶ್ಯಾ ಹಾಗೂ ಭಾರತ, ಅಲಂಕಾರಿಕ ಮೀನುಗಳ ಪ್ರಮುಖ ರಫ್ತುದಾರರು. ಯುಎಸ್‌ಎ, ಯೂರೋಪ್ ಮತ್ತು ಜಪಾನ್ ಅಲಂಕಾರಿಕ ಮೀನುಗಳನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ದೇಶಗಳು.

ಬೆಂಗಳೂರಿನ ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರಂ ಹಾಗೂ ಜಯನಗರ ಬಡಾವಣೆಗಳಲ್ಲಿ ಅಧಿಕ ಸಂಖ್ಯೆಯ ಅಲಂಕಾರಿಕ ಮೀನು ಮಾರಾಟಗಾರರಿದ್ದಾರೆ. ಈ ಮೀನುಗಳ ಕೊರತೆಯ ಕಾರಣ ಬೆಲೆಗಳೂ ಗಗನಕ್ಕೇರಿವೆ. ದೇಶದಲ್ಲಿ ನಡೆಯುವ ಅಲಂಕಾರಿಕ ಮೀನುಗಳ ಆಂತರಿಕ ವ್ಯಾಪಾರದ ವಹಿವಾಟು 15 ಕೋಟಿಯಷ್ಟು.

ಮನೆಯ ಅಲಂಕಾರ ಹೆಚ್ಚಿಸಲು, ವಾಸ್ತು ಸಮಸ್ಯೆಗಳ ಪರಿಹಾರಕ್ಕಾಗಿ, ಮಾನಸಿಕ ಚೈತನ್ಯಕ್ಕಾಗಿ ಅಲಂಕಾರಿಕ ಮೀನುಗಳಿಗೆ ದಿನೇದಿನೆ ಬೇಡಿಕೆ ಹೆಚ್ಚುತ್ತಿದೆ.
(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X