ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರೆರೆರೆರೆರೇ! ಈ ಪೊಲೀಸಪ್ಪನಿಗೆ ಹೀಗಾದ್ರೆ,ನಮ್ ಗತಿ?-

By Staff
|
Google Oneindia Kannada News

ಬೆಂಗಳೂರು, ಸೆ.26 : ಸ್ಕೂಟರ್ ಹೋಯಿತು, ಮೊಬೈಲ್ ಹೋಯಿತು, ವಾಚ್ ಹೋಯಿತು, ಸರ ಹೋಯಿತು ಎಂದು ಜನ ಗೋಳಾಡುವುದು ಬೆಂಗಳೂರಿನಲ್ಲಿ ನಿತ್ಯ ಇದ್ದದ್ದೇ. ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡುವುದು, ಕಳೆದು ಹೋದ ವಸ್ತು ಸಿಗಲೆಂದು ದೇವರ ಪ್ರಾರ್ಥಿಸುವುದು ಅಮೇಲಿನ ಪ್ರಕ್ರಿಯೆ. ಆದರೆ ಪೊಲೀಸರ ವಾಹನವೇ ಕಳುವಾದರೆ, ಅವರು ಯಾರಿಗೆ ದೂರು ನೀಡಬೇಕು?

ಇಂಥ ಘಟನೆ ನಗರದ ಆಸ್ಟಿನ್ ಟೌನ್ ನಿಂದ ಬುಧವಾರ(ಸೆ.26) ವರದಿಯಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ಎಂ.ಹೆಚ್.ಪೈಕ್ ಅವರ ಮೋಟರ್ ಸೈಕಲ್ ಕಳುವಾಗಿದೆ. ಅದೂ ಪೊಲೀಸ್ ವಸತಿಗೃಹದಲ್ಲಿ. ಸಿಓಡಿ ಪಡೆಯಲ್ಲಿ ಇನ್ಸ್ ಪೆಕ್ಟರ್ ಆಗಿರುವ ಪೈಕ್, ಮಂಗಳವಾರ ಬೆಳಗ್ಗೆ 11.30ಕ್ಕೆ ಮನೆಗೆ ಬಂದಿದ್ದರು. ಮನೆ ಮುಂದೆ ಕಚೇರಿಯ ಮೋಟರ್ ಬೈಕ್ ನಿಲ್ಲಿಸಿ, ಲಾಕ್ ಮಾಡಿದ್ದರು. ನಂತರ 12.30ಕ್ಕೆ ಅವರು ಹೊರಬಂದು ನೋಡಿದರೆ, ಮೋಟರ್ ಬೈಕ್ ಮಾಯ!

ಬೈಕ್ ಕದ್ದ ಕಳ್ಳ ಮೊದಲು ಕೈಗೆ ಸಿಗಲಿ, ಅವನಿಗೆ ಮುಂದಿದೆ ಮಾರಿ ಹಬ್ಬ ಎನ್ನುತ್ತಿದ್ದಾರೆ ಪೊಲೀಸರು. ಕಳ್ಳತನ ಮಾಡೋ ಖದೀಮನಿಗೆ, ಆ ವಸ್ತು ಸಾಮಾನ್ಯರದಾದ್ರೇನು, ಪೊಲೀಸ್ ನವರದಾದ್ರೇನು ಅಂತೀರಾ?

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X