• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೀಮ್ ಇಂಡಿಯಾದ ಕಾಲು ನೆಲದ ಮೇಲೆಯೇ ಇರಲಿ..

By Staff
|

ಬೆಂಗಳೂರು, ಸೆಪ್ಟೆಂಬರ್ 25 : ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬಂತೆ ಮಂಗಳವಾರ(ಸೆ.25)ವೂ ಭಾರತದ ಗೆಲುವಿನ ಬಗ್ಗೆಯೇ ಎಲ್ಲೆಡೆ ಮಾತು, ಚರ್ಚೆ,ಸಂಭ್ರಮ. ದಿಗ್ವಿಜಯ ಸಾಧಿಸಿದ ಹೆಮ್ಮೆ ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ.

ಕನ್ನಡ ಮಾಧ್ಯಮಗಳಂತೂ ಸೋಮವಾರ ರಾತ್ರಿ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟ್ವೆಂಟಿ20 ಕ್ರಿಕೆಟ್ ಪಂದ್ಯವನ್ನು ಯುದ್ಧತಂತೆಯೇ ವರ್ಣಿಸಿದ್ದವು. 'ಅಂತಿಮ ಕದನ'ಎಂದು ಕನ್ನಡ ಪ್ರಭ ಬ್ಯಾನರ್ ತಲೆಬರಹ ನೀಡಿ ಸಾರ್ಥಕತೆಯ ಭಾವ ಪ್ರದರ್ಶಿಸಿತ್ತು. ಪಂದ್ಯದ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲು ಟೀವಿ9, ಜೋಹಾನ್ಸ್ ಬರ್ಗ್ ನಲ್ಲಿ ಕುಳಿತಿತ್ತು. ಬೆಳಗ್ಗೆ 11ರಿಂದ ರಾತ್ರಿ 11ದಾಟಿದರೂ ಟಿವಿ9ನಲ್ಲಿ ಕ್ರಿಕೆಟ್ ಬಗ್ಗೆಯೇ ಮಾತು. ರಾತ್ರಿ 10.30ರ ಈಟೀವಿಯ ಕನ್ನಡನಾಡಿಯಲ್ಲೂ ಕ್ರಿಕೆಟ್ ಗೆ ಅಗ್ರಪಾಲು.

ಪಾಕಿಸ್ತಾನವನ್ನು ಬಗ್ಗು ಬಡಿದ ಟೀಮ್ ಇಂಡಿಯಾದ ಧೋನಿ ಬಳಗ ಟ್ವೆಂಟಿ20 ವಿಶ್ವಕಪನ್ನು ಎತ್ತಿ ಹಿಡಿದಿದೆ. ಈ ಘಳಿಗೆಯನ್ನು ನಮ್ಮ ಪತ್ರಿಕೆಗಳು ಆಕರ್ಷಕ ತಲೆಬರಹಗಳ ಮುಖಾಂತರ ಇಂದು ವರ್ಣಿಸಿದ ಬಗೆ ಹೀಗಿದೆ :

  • ಭಾರತ ಯುವ ಪಡೆ ವಿಶ್ವ'ಸಾಮ್ರಾಟ್' : ಪ್ರಜಾವಾಣಿ.
  • ಜಯದ ಪ್ರತೀಕ ಯಂಗ್ ಇಂಡಿಯಾ : ಕನ್ನಡಪ್ರಭ
  • ವಿಜಯೀ ಭಾರತ : ವಿಜಯ ಕರ್ನಾಟಕ
  • ಗೆಲುವೇ ವಿಸ್ಮಯ! : ಉದಯವಾಣಿ
  • ದಸರೆಗೆ ಮುನ್ನವೇ ದೀಪಾವಳಿ : ಟೈಮ್ಸ್ ಆಫ್ ಇಂಡಿಯಾ

Chak de India24ವರ್ಷಗಳ ನಂತರ ಮತ್ತೊಂದು ವಿಶ್ವಕಪ್ ಭಾರತಕ್ಕೆ ಸಿಕ್ಕಿದೆ. ಅಂದು ಕಪಿಲ್ ನಾಯಕತ್ವದಲ್ಲಿ ವಿಶ್ವಕಪ್ ನಮ್ಮದಾಗಿತ್ತು. ಇಂದು ಧೋನಿ ನೇತೃತ್ವದ ಯುವ ಪಡೆ ಟ್ವಿಂಟಿ20 ವಿಶ್ವಕಪ್ಪನ್ನು ತವರಿಗೆ ತಂದಿದೆ. ಪಂದ್ಯದ ಕೊನೆ ಕ್ಷಣದ ವರೆಗೆ ಏನಾಗುತ್ತದೆಯೋ ಎಂಬ ರೋಚಕತೆಯನ್ನು ಕ್ರಿಕೆಟ್ ಅಭಿಮಾನಿಗಳು ಅನುಭವಿಸಿದರು. ವಿಶ್ವಕಪ್ ಅನ್ನುವುದಕ್ಕಿಂತಲೂ ಅಂತಿಮ ಸುತ್ತಿನಲ್ಲಿ ಭಾರತ ಮತ್ತು ಪಾಕ್ ಎದುರುಬದುರಾದದ್ದು, ಪಂದ್ಯದ ಮಹತ್ವವನ್ನು ಹೆಚ್ಚಿಸಿತ್ತು. ಕಪ್ ಗೆದ್ದ ಟೀಮ್ ಇಂಡಿಯಾದ ಹುಡುಗರನ್ನು ಭಾರತ ಭಾಗ್ಯವಿದಾತರೆಂದು ಮಾಧ್ಯಮಗಳು ಬಣ್ಣಿಸುತ್ತಿವೆ. ಅಭಿಮಾನಿಗಳು ಹೌದೌದೌದೌದೌದು ಅನ್ನುತ್ತಿದ್ದಾರೆ!

ಒಂದು ವೇಳೆ ನಿನ್ನೆಯ ಪಂದ್ಯದಲ್ಲಿ ಭಾರತ ಸೋತಿದ್ದರೆ ಆ ಕತೆಯೇ ಬೇರೆಯಾಗುತ್ತಿತ್ತು. ವಿಶ್ವಕಪ್ ಅಂಗಳದಿಂದ ಭಾರತ ತಂಡ ನಿರ್ಗಮಿಸಿದಾಗ ತವರಿನಲ್ಲಿ ಕ್ರಿಕೆಟ್ ಪ್ರೇಮಿಗಳು ನೀಡಿದ ಸ್ವಾಗತ(?) ಎಲ್ಲರಿಗೂ ನೆನಪಿದೆ. ವಿಶ್ವಕಪ್ ಅವಮಾನವನ್ನು ಈ ಟ್ವೆಂಟಿ ಟ್ವೆಂಟಿ ವಿಶ್ವಕಪ್ ತುಂಬಿಕೊಟ್ಟಿದೆ ಎಂದು ಹೇಳುವಂತಿಲ್ಲ. ಯಾಕೆಂದರೆ ಒಂದು ಸೋಲನ್ನು ಇನ್ನೊಂದು ಗೆಲುವು replace ಮಾಡಲು ಸಾಧ್ಯವಿಲ್ಲ. ಗೆದ್ದರೂ ಕಾಲು ನೆಲದ ಮೇಲೆಯೇ ಇರಲಿ.. ಮುಂದಿನ ದಿನಗಳಲ್ಲಿ ಇನ್ನಷ್ಟು ಚೆನ್ನಾಗಿ ಆಟ ಆಡಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ತರಲಿ ಎಂಬುದು ನಮ್ಮ ಆಶಯ. ಜೊತೆಗೆ ಕ್ರಿಕೆಟ್ ಪ್ರೇಮಿಗಳ ಒತ್ತಾಯ.

ದುಡ್ಡು ದುಡ್ಡು ದುಡ್ಡು : ಟೀಮ್ ಇಂಡಿಯಾ ಬಳಿಗೆ ಈಗ ದುಡ್ಡಿನ ಹೊಳೆಯೇ ಹರಿದು ಬರಲಿದೆ. ಬಿಸಿಸಿಐ ಭಾರತ ತಂಡಕ್ಕೆ 8ಕೋಟಿ ರೂ. ಮತ್ತು ಯುವರಾಜ್ ಸಿಂಗ್ ಗೆ 1ಕೋಟಿ ರೂ. ಬಹುಮಾನ ನೀಡಲಿದೆ. ಇತ್ತ ರಾಬಿನ್ ಉತ್ತಪ್ಪ ಮತ್ತು ಕೋಚ್ ವೆಂಕಟೇಶ್ ಪ್ರಸಾದ್ ಗೆ ತಲಾ 5 ಲಕ್ಷ ರೂ. ಬಹುಮಾನವನ್ನು ಕರ್ನಾಟಕ ಸರ್ಕಾರ ಘೋಷಿಸಿದೆ. ಇಷ್ಟು ಮಾತ್ರವಲ್ಲದೇ ಕೋಟ್ಯಂತರ ರೂಪಾಯಿ ಹಣ ಪ್ರಾಯೋಜಕರಿಂದ, ಜಾಹೀರಾತು ಕಂಪನಿಗಳಿಂದ ಹರಿದು ಬರಲಿದೆ.

ಪಂದ್ಯದ ಸ್ಕೋರ್ ಬೋರ್ಡ್

(ದಟ್ಸ್ ಕನ್ನಡ ನ್ಯೂಸ್ ಡೆಸ್ಕ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more