• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೇಸ್‌ಕೋರ್ಸ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಅಗಲೀಕರಣ

By Staff
|

ಬೆಂಗಳೂರು, ಸೆಪ್ಟೆಂಬರ್ 24 : ನಗರದ ಕೆಲ ರಸ್ತೆಗಳಲ್ಲಿನ ಬೆಳಗ್ಗೆ ಮತ್ತು ಸಂಜೆಯ ಟ್ರಾಫಿಕ್ ಜಾಮ್ ನೆನೆಸಿಕೊಂಡರೆ, ಬೆಂಗಳೂರಿಗರು ಭಯಬೀಳುತ್ತಾರೆ. ರಸ್ತೆಗಳ ಅಗಲೀಕರಣ, ಫ್ಲೈ ಓವರ್ ಗಳು ಅಂದುಕೊಂಡಷ್ಟು ಸಮಸ್ಯೆಯನ್ನು ಕಿರಿದು ಮಾಡಿಲ್ಲ. ಈ ಮಧ್ಯೆ ಬೆಂಗಳೂರು ಟರ್ಫ್ ಕ್ಲಬ್‌ನ ಗೋಡೆಯನ್ನು ಕೆಡವಿ, ರೇಸ್‌ಕೋರ್ಸ್ ರಸ್ತೆಯನ್ನು ಅಗಲೀಕರಣ ಮಾಡಲು ಬಿಬಿಎಂಪಿ ಮುಂದಾಗಿದೆ.

ಕಳೆದ ಗುರುವಾರ(ಸೆ. 20) ಗೋಡೆಯ ಒಂದಿಷ್ಟು ಭಾಗವನ್ನು ಕೆಡವಲಾಗಿದೆ. ಉಳಿದ ಭಾಗಗಳನ್ನು ಹೆಚ್ಚು ಹಾನಿಯಾಗದಂತೆ ತಾನೇ ಕೆಡುವುವುದಾಗಿ ಟರ್ಫ್ ಕ್ಲಬ್ ಆಡಳಿತ ಹೇಳಿದೆ. ಐದು ಕೋಟಿ ರೂಗಳ, ಆರು ಲೇನ್‌ ವಿಸ್ತೀರ್ಣ ಮತ್ತು 30ಮೀಟರ್ ಅಗಲದ ಯೋಜನೆ ಪೂರ್ಣಗೊಂಡರೆ, ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಕುದುರೆಯ ವೇಗ ಬರಲಿದೆ! ಆನಂದರಾವ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯು ಅಗಲೀಕರಣವಾಗಲಿದೆ. ಪ್ರಸ್ತುತ ರಸ್ತೆಯ ಅಗಲ 7ರಿಂದ 12 ಮೀಟರುಗಳು ಮಾತ್ರ.

ರಸ್ತೆಯ ಅಗಲೀಕರಣಕ್ಕಾಗಿ ಅಕ್ಕಪಕ್ಕದ 12ಖಾಸಗಿ ಹಾಗೂ 7ಸರಕಾರಿ ಕಚೇರಿಗಳ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಆಗಸ್ಟ್ 2007ರ ಹೊತ್ತಿಗೆ ಪೂರ್ಣವಾಗಬೇಕಿದ್ದ ಯೋಜನೆ, ಬೆಂಗಳೂರು ಟರ್ಫ್ ಕ್ಲಬ್‌ಗೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ವಿಳಂಬವಾದ ಕಾರಣ ಕುಂಟುತ್ತಾ ಸಾಗುತ್ತಿತ್ತು. ಇನ್ನು ಆರು ತಿಂಗಳಲ್ಲಿ ಟರ್ಫ್ ಕ್ಲಬ್‌ನ ಪ್ರವೇಶ ದ್ವಾರದಿಂದ ಬಸಬೇಶ್ವರ ವೃತ್ತದವರೆಗಿನ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿಯ ಮುಖ್ಯ ಅಭಿಯಂತರ(ಇಂಜಿನೀಯರ್) ಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ಪ್ಯಾಲೇಸ್ ರಸ್ತೆ, ಶೇಷಾದ್ರಿ ರಸ್ತೆ, ಬಳ್ಳಾರಿ ರಸ್ತೆ, ಹೊಸೂರು ರಸ್ತೆ, ಕಸ್ತೂರಬಾ ರಸ್ತೆ, ನೃಪತುಂಗ ರಸ್ತೆ ಮತ್ತು ಹೊಸೂರು-ಲಸ್ಕರ್ ರಸ್ತೆಗಳು ಈ ವರ್ಷಾ೦ತ್ಯಕ್ಕೆ ಅಗಲೀಕರಣವಾಗಲಿವೆ ಎಂದು ಬಿಬಿಎಂಪಿ ತಿಳಿಸಿದೆ.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more