ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅಚ್ಚುಮೆಚ್ಚಿನ ವ್ಯಕ್ತಿ ಪ್ರಶಾಂತ್ ನತ್ತ ಹಣದ ಹೊಳೆ

By Staff
|
Google Oneindia Kannada News

Prashanth Tamang is Indian Idolನವದೆಹಲಿ, ಸೆಪ್ಟೆಂಬರ್ 24 : 'ಇಂಡಿಯನ್ ಐಡಲ್" ಆಯ್ಕೆಗಾಗಿ ಎರಡು ತಿಂಗಳ ಕಾಲ ನಡೆದ ರಿಯಾಲಿಟಿ ಷೋನಲ್ಲಿ, ಪಶ್ಚಿಮ ಬಂಗಾಲದ ಪೋಲೀಸ್ ಪೇದೆ ಪ್ರಶಾಂತ್ ತಮಂಗ್ (24) ಆಯ್ಕೆಯಾಗಿದ್ದಾರೆ.

ಈ ಗೆಲುವಿನಿಂದ ತಮಾಂಗ್‌ಗೆ ಹಣ ಸೇರಿದಂತೆ ಉಡುಗೊರೆಗಳ ಮಹಾಪೂರವೇ ಹರಿದು ಬಂದಿದೆ. ಮಾರುತಿ ಉದ್ಯೋಗ್‌ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಕಟ್ಟರ್ ಕಾರೊಂದನ್ನು ನೀಡಿದ್ದಾರೆ. ಸೋನಿ ಟಿವಿಯಿಂದ ಒಂದು ಕೋಟಿ ರೂಗಳ ಗುತ್ತಿಗೆ ಹಾಗೂ ಹಲವು ಬಹುಮಾನಗಳು ತಮಾಂಗ್‌ನ ಮಡಿಲಿಗೆ ಬಿದ್ದಿವೆ.

ತಮಂಗ್‌ ಮತ್ತು ಅಮಿತ್ ಪೌಲ್‌ರ ನಡುವೆ ತೀವ್ರ ಪೈಪೋಟಿ ಇತ್ತು. ತಮಾಂಗ್ ಗೆದ್ದ ಸುದ್ದಿಯನ್ನು ಭಾನುವಾರ(ಸೆ.24)ರಾತ್ರಿ ಪ್ರಕಟಿಸುತ್ತಿದ್ದಂತೆ ಸಮಾರಂಭದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಇದ್ದ ಪ್ರೇಕ್ಷಕರು ಆನಂದದಿಂದ ಕೇಕೆ ಹಾಕಿದರು. ಅನುಮಲಿಕ್, ಜಾವೇದ್ ಅಖ್ತರ್, ಉದಿತ್ ನಾರಾಯಣ್ ಮತ್ತು ಅಲೀಷಾ ಚಿನಾಯ್ ತೀರ್ಪುಗಾರರಾಗಿದ್ದರು.

ಎಸ್ಸೆಮ್ಮೆಸ್ ಮತ್ತು ಫೋನ್ ಮೂಲಕ ಮತ ಚಲಾಯಿಸುವ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ, ಏಳು ಕೋಟಿಗೂ ಅಧಿಕ ಮತಗಳು ಚಲಾವಣೆಯಾದವು. ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಅಮಿತ್ ಪೌಲ್‌ಗಿಂತ(24) ತಮಾಂಗ್ ಅಧಿಕ ಮತ ಪಡೆದು ಮೂರನೆಯ ಇಂಡಿಯನ್ ಐಡಲ್‌ ಆಗಿ ಜಯಗಳಿಸಿರುವುದಾಗಿ ನಟ ಜಾನ್ ಅಬ್ರಹಾಂ ಘೋಷಿಸಿದರು.

ಸದ್ಯ ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ್ ,ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕೊಟ್ಟಂತಹ ಬಂಗಾಲಿ ಪೋಲೀಸರಿಗೆ, ತನ್ನ ತಾಯಿ ಹಾಗೂ ಸಾರ್ವಜನಿಕರಿಗೆ ತಮಾಂಗ್ ಕೃತಘ್ನತೆ ತಿಳಿಸಿದರು.

(ಏಜನ್ಸೀಸ್)

ನಿಮ್ಮ ಗಮನಕ್ಕೆ:

ಇಂಡಿಯನ್ ಐಡಲ್ 1 : ಅಭಿಜಿತ್ ಸಾವಂತ್
ಇಂಡಿಯನ್ ಐಡಲ್ 2 : ಸಂದೀಪ್ ಆಚಾರ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X