ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನುಡಿ : ನವೆಂಬರ್ ನಿಂದ ಗಣಕದಲ್ಲಿ ಕನ್ನಡ ಇನ್ನಷ್ಟು ಸುಲಭ

By Staff
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24 : ನುಡಿ ತಂತ್ರಾಂಶವನ್ನು ಕನ್ನಡ ಗಣಕ ಪರಿಷತ್ತು, ಸದ್ಯದಲ್ಲೇ ಪರಿಷ್ಕರಿಸಲಿದೆ. ಹುಡುಕು ಯಂತ್ರ(ಸರ್ಚ್ ಇಂಜಿನ್)ಸೇರಿದಂತೆ ಹೊಸ ಸೌಲಭ್ಯಗಳನ್ನು ನುಡಿ ಹೊಂದಲಿದೆ ಎಂದು ಪರಿಷತ್ತಿನ ಕಾರ್ಯದರ್ಶಿ ಜಿ.ಎನ್.ನರಸಿಂಹ ಮೂರ್ತಿ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಮೈಕ್ರೋ ಸಾಫ್ಟ್ ವರ್ಡ್ ನಲ್ಲಿ ಇಂಗ್ಲಿಷ್ ಬಳಸಿದಂತೆಯೇ ಗಣಕದಲ್ಲಿ ಕನ್ನಡವನ್ನು ಬಳಸಲಾಗುವಂತೆ ನುಡಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಗುಣಿತ ಪರೀಕ್ಷಕ ಸೇರಿದಂತೆ ವಿವಿಧ ಪರಿಕರಗಳನ್ನು ಸಿದ್ಧಪಡಿಸಲಾಗುತ್ತಿದೆ. ನವೆಂಬರ್ ವೇಳೆಗೆ ನುಡಿಯ ಹೊಸ ಆವೃತ್ತಿ ಬಿಡುಗಡೆಯಾಗಲಿದೆ ಎಂದರು.

ಯುನಿಕೋಡ್ ಮತ್ತು ಆನ್ಸಿಗೆ ಪರಿವರ್ತನೆಯಾಗುವಂತೆ, ಅಂತರ್ಜಾಲದಲ್ಲಿ ನುಡಿಯನ್ನು ಬಳಸಿ ವೆಬ್ ಫೈಲ್ ಗಳನ್ನು ರಚಿಸಲಾಗುವಂತೆ ಮತ್ತು ಗಣಕ ಲೋಕದ ಹೊಸ ಸವಾಲುಗಳನ್ನು ಕನ್ನಡ ಎದುರಿಸಲು ಪೂರಕವಾಗುವಂತೆ ನುಡಿ ಅಭಿವೃದ್ಧಿಗೊಳ್ಳಲಿದೆ ಎಂದು ಜಿ.ಎನ್.ನರಸಿಂಹ ಮೂರ್ತಿ ವಿವರಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X