ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆ ಏರಿಕೆ ಕಂಡ ಸೂಚ್ಯಂಕ: ದೂರವಾದ ಆತಂಕ

By Staff
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19 : ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಇಂದು ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರಿಂದ ಬಿಎಸ್‌ಇ ಸೂಚ್ಯಂಕ 16,060 ಪಾಯಿಂಟ್‌ಗಳ ಏರಿಕೆ ಕಂಡಿದೆ. ಇದೊಂದು ಸರ್ವಕಾಲಿಕ ದಾಖಲೆ. ಈ ಏರಿಕೆ ಮಾರ್ಕೆಟ್ ವಲಯದಲ್ಲಿ 'ಸ್ವೀಟ್ ಸಿಕ್ಸ್‌ಟೀನ್" ಎಂದು ಬಣ್ಣಿತವಾಗಿದೆ.

ಅಮೆರಿಕಾದ ಫೆಡರಲ್ ಬ್ಯಾಂಕ್ ಬಡ್ಡಿ ದರವನ್ನು ಶೇ.0.5ರಷ್ಟು ಕಡಿಮೆ ಮಾಡಿದ್ದರಿಂದ ಎಲ್ಲ ಸ್ಟಾಕ್ ಮಾರ್ಕೆಟ್‌ಗಳಲ್ಲೂ ಈ ಏರಿಕೆ ಕಂಡುಬಂದಿದೆ. ಮಾರುಕಟ್ಟೆ ಪ್ರಾರಂಭವಾದ ಐದು ನಿಮಿಷದಲ್ಲಿ ಸೆನ್ಸೆಕ್ಸ್ 447 ಪಾಯಿಂಟ್‌ಗಳ ಲಾಭವನ್ನು ಸಾಧಿಸಿ 16,116ಕ್ಕೆ ತಲುಪಿತು. ಇದೇ ಹಾದಿಯಲ್ಲಿ ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ನಿಪ್ಟಿ ಸಹ 131 ಪಾಯಿಂಟ್‌ಗಳನ್ನು ಸಾಧಿಸಿ 4,677ಕ್ಕೆ ತಲುಪಿತು. ಒಟ್ಟಿನಲ್ಲಿ ಈ ಏರಿಕೆ ಷೇರು ಮಾರುಕಟ್ಟೆಯಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಯಿತು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X