ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಈ ಮಹಿಳೆಯರಿಗೆ ವಿದೇಶ ಕೆಲಸ ಗಗನಕುಸುಮ

By Staff
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19 : ಹೊರದೇಶದಲ್ಲಿ ಉದ್ಯೋಗ ಪಡೆಯದಂತೆ, ಹೈಸ್ಕೂಲ್ ಶಿಕ್ಷಣ ಮುಗಿಸದ 30ವರ್ಷದೊಳಗಿನ ಮಹಿಳೆಯರಿಗೆ ಭಾರತ ಸರ್ಕಾರ ನಿರ್ಬಂಧ ಹೇರಿದೆ.

ಕೆಲಸದ ಸ್ಥಳ ಅಥವಾ ಇತರೇ ಸ್ಥಳಗಳಲ್ಲಿ ಅವರ ಮೇಲೆ ನಡೆಯುವ ಶೋಷಣೆಯನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಗರೋತ್ತರ ಭಾರತೀಯ ವ್ಯವಹಾರಗಳ ಮಂತ್ರಿ ವಯಲಾರ್ ರವಿ ಸುದ್ದಿಗಾರರಿಗೆ ಹೇಳಿದರು.

ಕೆಲಸದ ಕರಾರುಗಳು ಇನ್ನು ಮೇಲೆ ಉದ್ಯೋಗದಾತ ಮತ್ತು ಕೆಲಸಗಾರರ ನಡುವೆ ನೇರವಾಗಿ ಯಾವುದೇ ದಲ್ಲಾಳಿಗಳಿಲ್ಲದೆ ನಡೆಯಬೇಕು . ಈ ಉದ್ಯೋಗ ಕರಾರುಗಳನ್ನು ಭಾರತೀಯ ರಾಜತಾಂತ್ರಿಕ ಕಚೇರಿಗಳು ಖಚಿತಪಡಿಸುತ್ತವೆ. ಪ್ರತಿಯೊಬ್ಬ ಮಹಿಳಾ ಕೆಲಸಗಾರರಿಗೂ ಆಪತ್ಕಾಲದಲ್ಲಿ ತಮ್ಮ ದೇಶದ ಅಧಿಕಾರಿಗಳನ್ನು ಸಂಪರ್ಕಿಸಲು ಅನುವಾಗುವಂತೆ ಪ್ರಿ ಪೇಯ್ಡ್ ಮೊಬೈಲ್ ಫೋನ್ ಕಾರ್ಡನ್ನು ಒದಗಿಸಬೇಕು ಎಂದು ಸಚಿವರು ಹೇಳಿದರು.

ಈ ಆಜ್ಞೆ ಈ ತಿಂಗಳ ಪ್ರಾರಂಭದಿಂದ ಜಾರಿಗೆ ಬಂದಿದೆ. ಈ ಎಲ್ಲಾ ಕ್ರಮಗಳನ್ನು ವಿದೇಶಾಂಗ ಸಚಿವಾಲಯ ಕೊಲ್ಲಿಯಲ್ಲಿರುವ ಎಲ್ಲಾ ಭಾರತೀಯ ರಾಯಭಾರಿಗಳೊಂದಿಗೆ ಚರ್ಚಿಸಿದ ನಂತರ ಕೈಗೊಂಡಿದೆ.

ಮನೆಕೆಲಸ ಅಥವಾ ಬ್ಯೂಟಿ ಸಲೂನ್‌ಗಳಲ್ಲಿ ಕಾರ್ಯ ನಿರ್ವಹಿಸುವಾಗ ಮೋಸ ಮತ್ತು ಕಿರುಕುಳದ ಅನೇಕ ದೂರುಗಳನ್ನು ಪಡೆದ ನಂತರ, ಈ ನಿರ್ಧಾರಕ್ಕೆ ಬರಲಾಯಿತೆಂದು ತಿಳಿಸಿದ ರವಿ , ತಮ್ಮ ದೂರುಗಳನ್ನು ನೇರವಾಗಿ ರಾಜತಾಂತ್ರಿಕ ಕಚೇರಿ ಅಥವಾ ಸಚಿವಾಲಯಕ್ಕೆ ಸಲ್ಲಿಸಲು ನೆರವಾಗುವಂತೆ ಸಹಾಯವಾಣಿಯೊಂದನ್ನು ತೆರೆಯಲು ಯೋಜಿಸುತ್ತಿದ್ದೇವೆ. ಕೆಲವು ದೇಶಗಳಲ್ಲಿ ಇದು ಈಗಾಗಲೆ ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X