ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ : 100ವರ್ಷದ ವೃದ್ಧೆ ಜವರಮ್ಮ ಬೆಂಕಿ ಪಾಲು

By Staff
|
Google Oneindia Kannada News

ಹಾಸನ, ಸೆಪ್ಟಂಬರ್ 19 : ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಶಿಗೋಡು ಗ್ರಾಮದಲ್ಲಿ ಶತಾಯುಷಿ ವೃದ್ಧೆಯೊಬ್ಬರು ಜೀವಂತವಾಗಿ ದಹನವಾದ ದಾರುಣ ಘಟನೆ ವರದಿಯಾಗಿದೆ.

ಗುಡಿಸಲಿಗೆ ಬೆಂಕಿ ಬಿದ್ದ ಕಾರಣ ಮಲಗಿದ್ದ ಜವರಮ್ಮ (100) ಎಂಬ ವೃದ್ಧೆ ಜೀವಂತವಾಗಿ ಅಗ್ನಿಗೆ ಬಲಿಯಾಗಿದ್ದಾರೆ. ಜವರಮ್ಮನ ಮಗಳು ಸಿದ್ಧಮ್ಮ ಒಲೆ ಹಚ್ಚಿ ಪಕ್ಕದ ಮನೆಯಲ್ಲಿ ಉಪ್ಪನ್ನು ತರಲು ಹೋಗಿದ್ದಾಗ, ಒಲೆಯಿಂದೆದ್ದ ಕಿಡಿ ಗುಡಿಸಿಲಿಗೆ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ. ಜವರಮ್ಮನ ಮೊಮ್ಮಕ್ಕಳು ಊರಿಗೆ ಹೋಗಿದ್ದರು. ಈ ಘಟನೆಯ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ ಎಂದು ಪೋಲೀಸ್ ಮೂಲಗಳು ತಿಳಿಸಿವೆ.

ಘಟನೆಯು ಜಿಲ್ಲೆಯ ಕೋಣನೂರು ಪೋಲೀಸ್ ಠಾಣಾ ಪರಿಧಿಯಲ್ಲಿ ನಡೆದಿದೆ. ಇತ್ತೀಚೆಗೆ ಆಶ್ರಯ ಯೋಜನೆಯಡಿ ಇವರಿಗೆ ಮನೆ ಹಂಚಿಕೆಯಾಗಿತ್ತು.
ಘಟನೆ ನಡೆದ ಸ್ಥಳಕ್ಕೆ ಅರಕಲಗೂಡಿನ ಶಾಸಕ ಎ.ಟಿ.ರಾಮಸ್ವಾಮಿ ಭೇಟಿ ನೀಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X