ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಎನ್ನುತ್ತಿದೆ ಸರ್ಕಾರ

By Staff
|
Google Oneindia Kannada News

ಮೈಸೂರು, ಸೆಪ್ಟೆಂಬರ್ 18: ಮೈಸೂರು ದಸರ ನೋಡಲು ಚಂದ, ತಂಬೂರಿ ಪದ ಕೇಳಲು ಚಂದ. ಆದರೆ ಸರಕಾರ ಮಾತ್ರ ತಂಬೂರಿ ನುಡಿಸಲು ಅವಕಾಶ ಕೊಡುತ್ತಿಲ್ಲ. ಈ ದಸರೆಗಾದರೂ ನಮಗೆ ಅವಕಾಶ ಕಲ್ಪಿಸಿ ಎನ್ನುತ್ತಿದ್ದಾರೆ ತಂಬೂರಿ ಕಲಾವಿದರು.

ಕರ್ನಾಟಕದ ಜಾನಪದ ಕಲೆಯ ಸಂಕೇತವಾದ ತಂಬೂರಿಯನ್ನು ಕಡೆಗಣಿಸಲಾಗುತ್ತಿದೆ. ದಸರ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ನೀಲಗಾರರ ತಂಬೂರಿ ಕಲೆಯನ್ನು ಪ್ರದರ್ಶಿಸಲು ಅವಕಾಶ ಕೊಡಬೇಕೆಂದು ಮೈಸೂರು ಜಿ. ಗುರುರಾಜ್ ಒತ್ತಾಯಿಸಿದ್ದಾರೆ.

ಶಾಸ್ತ್ರೀಯ, ಜಾನಪದ, ಲಘು ಸಂಗೀತ, ಶಹನಾಯಿ, ಕೊಳಲು ಮತ್ತು ವೀಣಾ ವಾದನಕ್ಕೆ ಅವಕಾಶ ಕಲ್ಪಿಸಿ ತಂಬೂರಿ ಸ್ವರವನ್ನು ತೀರಾ ಕಡೆಗಣಿಸಲಾಗಿದೆ ಈ ಬಾರಿಯಾದರೂ ಮೈಸೂರು ಅರಮನೆಯಲ್ಲಿ ಹಾಡಲು ಅವಕಾಶ ಕಲ್ಪಿಸಬೇಕು. ಕಳೆದ 25 ವರ್ಷಗಳಿಂದ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ತಂಬೂರಿ ಪದಗಳು ಪ್ರಸಾರವಾಗುತ್ತಿದ್ದರೂ ಸರ್ಕಾರ ಕಿವುಡಾಗಿದೆ ಎಂದು ದೂರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X