ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮಸ್ಥರ ಬಹಿಷ್ಕಾರದಿಂದ ಕಂಗೆಟ್ಟ ಏಡ್ಸ್ ಪೀಡಿತರ ಕುಟುಂಬ

By Super
|
Google Oneindia Kannada News

ಜಗನ್ನಾಥಪುರ(ಬಿಹಾರ), ಸೆಪ್ಟೆಂಬರ್ 17 : ಏಡ್ಸ್ ಮಾರಿಯ ಹಿಂಸೆ ಒಂದುಕಡೆಯಾದರೆ, ಜನರ ಅಮಾನವೀಯತೆಯ ಕಿರಿಕಿಕಿ ಇನ್ನೊಂದು ಕಡೆ. ಇವೆರಡರ ಮಧ್ಯೆ ಜಗನ್ನಾಥಪುರದ ವಿಶ್ವೇಶ್ವರ ಪಾಸ್ವಾನ್ ಮತ್ತು ಅವನ ಕುಟುಂಬ ನಲುಗುತ್ತಿದೆ.

ಗ್ರಾಮಸ್ಥರ ಬಹಿಷ್ಕಾರಕ್ಕೆ ಗುರಿಯಾಗಿ, ಒಂಟಿತನದಿಂದ ಕಂಗೆಟ್ಟಿದೆ. ಬಹಿಷ್ಕಾರಕ್ಕೆ ಕಾರಣ ಏಡ್ಸ್ ಬಗೆಗಿನ ತಪ್ಪು ತಿಳಿವಳಿಕೆ. ವಿಶ್ವೇಶ್ವರ ಪಾಸ್ವಾನ್ ಕುಟುಂಬದ ಮೂವರಿಗೆ ಹೆಚ್ಐವಿ/ಏಡ್ಸ್ ಇರುವುದು ಪತ್ತೆಯಾಗಿದೆ.

ಏಡ್ಸ್ ನ್ನು ಅಂಟುರೋಗವೆಂದು ತಿಳಿದಿರುವ ಗ್ರಾಮದ ಜನರು, ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಸ್ಪರ್ಶದಿಂದ, ಮಾತನಾಡುವುದರಿಂದ ರೋಗ ಹರಡುತ್ತದೆ ಎಂದು ಜನರು ಅನಗತ್ಯ ಭಯಕ್ಕೆ ಒಳಗಾಗಿದ್ದಾರೆ.

ನಮ್ಮ ಮನೆಗೆ ಯಾರೂ ಬರುತ್ತಿಲ್ಲ. ನನಗೆ ಹಣ ಬೇಡ. ಹೇಗೋ ಮನೆ ನಡೆಸುತ್ತೇನೆ. ನನ್ನ ಕುಟುಂಬ ಸದಸ್ಯರಿಗೆ ಸರ್ಕಾರ ಚಿಕಿತ್ಸೆ ನೀಡಿದರೆ ಸಾಕು ಎನ್ನುತ್ತಾನೆ ವಿಶ್ವೇಶ್ವರ ಪಾಸ್ವಾನ್. ಆಡಳಿತ ಯಂತ್ರ ಇತ್ತ ನೋಡಬಾರದ?

English summary
Visheshwar Paswan and his entire family have become outcastes in their own village, Jagannathpur in Bihar, after three of the family members succumbed to HIV/AIDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X