ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ವಿದ್ಯಾರ್ಥಿ ಜಾತಿವಿವರ ನೀಡುವ ಅವಶ್ಯಕತೆಯಿಲ್ಲ

By Staff
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17 : ಶಾಲೆಗಳಲ್ಲಿ ಪ್ರವೇಶ ಪಡೆಯುವಾಗ ವಿದ್ಯಾರ್ಥಿಯು ಇನ್ನು ಮುಂದೆ ತನ್ನ ಜಾತಿ ವಿವರ ನೀಡುವಂತೆ ಶಾಲೆಗಳು ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠ ಈ ಬಗ್ಗೆ ವಿವರ ನೀಡುವುದು ವಿದ್ಯಾರ್ಥಿಯ ಆಯ್ಕೆಗೆ ಬಿಟ್ಟಿದ್ದು ಎಂದು ಮಹತ್ವದ ತೀರ್ಪು ನೀಡಿದೆ.

ತಮಿಳುನಾಡಿನ 81 ವರ್ಷದ ಸ್ವಾತಂತ್ರ್ಯಹೋರಾಟಗಾರ ಸೇಲಂ ವೇಲು ಗಾಂಧಿ ಅವರ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆಯಾದರೂ ಜಾತಿ ವಿವರಣೆ ಪಡೆಯುವುದರ ಮೇಲಿನ ಸಂಪೂರ್ಣ ನಿಷೇಧವನ್ನು ಹೇರುವ ಕೋರಿಕೆಯನ್ನು ತಿರಸ್ಕರಿಸಿದೆ.

ವೇಲು ಅವರ ಉದ್ದೇಶವನ್ನು ಶ್ಲಾಘಿಸುತ್ತಾ, ಜಾತಿಯ ಅಧಾರದ ಮೇಲೆ ವಿದ್ಯಾರ್ಥಿ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಹೊಂದುವವರಿಗೆ ಇದರಿಂದ ತೊಂದರೆಯಾಗಬಹುದೆಂದು ನ್ಯಾಯಪೀಠ ಹೇಳಿದೆ.

(ಏಜೆನ್ಸಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X