ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲುವಿನ ಹಾದಿಯಲ್ಲಿ ಮುಗ್ಗರಿಸಿದ ಭಾರತೀಯ ವೀರರು

By Staff
|
Google Oneindia Kannada News

ಜೋಹನ್ಸ್ ಬರ್ಗ್, ಸೆ.16 : ಟ್ವೆಂಟಿಟ್ವೆಂಟಿ ವಿಶ್ವಕಪ್ ನ ನ್ಯೂಜಿಲ್ಯಾಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತವು ಗೆಲುವಿನಲ್ಲಿ ಹಾದಿಯಲ್ಲಿ ಮುಗ್ಗರಿಸಿದೆ.

ಗೆಲ್ಲಲುಬೇಕಾಗಿದ್ದ 191 ರನ್ ಗಳಿಸಲು ಸಾಧ್ಯವಾಗದೆ ಭಾರತೀಯ ಕ್ರಿಕೆಟ್ ತಂಡ ನಿಗದಿತ 20 ಓವರುಗಳಲ್ಲಿ 180 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡಿತು.ಕೊನೆಯಲ್ಲಿ 21 ರನ್ ಗಳಿಸಿದ್ದ ಶ್ರೀಶಾಂತ್ ಹಾಗೂ 1 ರನ್ ಗಳಿಸಿದ್ದ ಆರ್ ಪಿ ಸಿಂಗ್ ಕ್ರೀಸ್ ನಲ್ಲಿ ಅಸಹಾಯಕ ಸ್ಥಿತಿಯಲ್ಲಿ ಉಳಿದಿದ್ದರು.

ಉಳಿದಂತೆ ಆರಂಭಿಕ ಆಟಗಾರ ಗೌತಂ ಗಂಭೀರ್ 51ರನ್(33 ಎಸೆತ, 5 ಬೌಂಡರಿ, 2 ಸಿಕ್ಸರ್), ಸೆಹ್ವಾಗ್ 40 ರನ್ (17 ಎಸೆತ, 6 ಬೌಂಡರಿ, 2 ಸಿಕ್ಸರ್), ನಾಯಕ ಧೋನಿ 24 ರನ್ (20 ಎಸೆತ, 2 ಬೌಂಡರಿ) ಕೊಂಚ ಹೋರಾಟದ ಆಟ ಪ್ರದರ್ಶಿಸಿದರು.

ಕಿವೀಸ್ ಪರ ನಾಯಕ ಡೇನಿಯಲ್ ವೆಟ್ಟೋರಿ 20 ರನ್ನಿತ್ತು 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿ, ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.

ಕಿವೀಸ್ ಬ್ಯಾಟಿಂಗ್ ಅಬ್ಬರ:

ಇದಕ್ಕೂ ಮುಂಚೆ ಟಾಸ್ ಸೋತರೂ ಬ್ಯಾಟಿಂಗ್ ಪಡೆದ ನ್ಯೂಜಿಲ್ಯಾಂಡ್ ತಂಡ , ಅದ್ಭುತ ಆಟ ಪ್ರದರ್ಶಿಸಿತು. ಆರಂಭಿಕ ಆಟಗಾರ ಮಕ್ ಕಲಂ 45 ರನ್(31ಎಸೆತ, 9 ಬೌಂಡರಿ), ಮ್ಯಾಕ್ ಮಿಲನ್44 ರನ್(23 ಎಸೆತ, 1 ಬೌಂಡರಿ, 4 ಸಿಕ್ಸರ್), ಜೆಕಬ್ ಒರಂ 35ರನ್(15 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ವೆಟ್ಟೋರಿ ಗಳಿಸಿದ 15 ರನ್ ( 5 ಎಸೆತ, 3ಬೌಂಡರಿ) ನೆರವಿನಿಂದ 190 ರನ್ ಗಳ ಉತ್ತಮ ಮೊತ್ತವನ್ನು ಕಲೆ ಹಾಕಿತ್ತು.

ಭಾರತದ ಪರ ಹರ್ಬಜನ್ ಸಿಂಗ್ ಹಾಗೂ ಆರ್ ಪಿ ಸಿಂಗ್ ತಲಾ 2 ವಿಕೆಟ್ ಗಳಿಸಿದರು. ಆದರೆ ಕಿವೀಸ್ ಆಟಗಾರರನ್ನು ಕಟ್ಟಿಹಾಕುವಲ್ಲಿ ಭಾರತೀಯ ಬೌಲಿಂಗ್ ಪಡೆ ವಿಫಲವಾದರು ಎನ್ನಬಹುದು.

ಯುವರಾಜ್ ಸಿಂಗ್ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ವಿಫಲರಾಗಿದ್ದು, ಭಾರತಕ್ಕೆ ಮುಳುವಾಯಿತು.

(ದಟ್ಸ್ ಕ್ರಿಕೆಟ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X