ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಂಎಸ್ ಮಾಡಿ, ಅಡುಗೆ ಅನಿಲ ರೀಫಿಲ್ ಮಾಡಿಸಿಕೊಳ್ಳಿ

By Staff
|
Google Oneindia Kannada News

ತಿರುಚನಾಪಳ್ಳಿ, ಸೆ.16: ದೇಶದಾದ್ಯಂತವಿರುವ ಭಾರತ್ ಗ್ಯಾಸ್ ಗ್ರಾಹಕರು ಇನ್ಮುಂದೆ ಅಡುಗೆ ಅನಿಲ ಬುಕ್ಕಿಂಗ್ ಹಾಗೂ ರೀಫಿಲ್ ಅನ್ನು ಮೊಬೈಲ್ ಸಂದೇಶ ನೀಡಿ ಮಾಡಿಕೊಳ್ಳಬಹುದು.

ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ(BPCL) ಈ ಎಸ್ ಎಂ ಎಸ್ ಗ್ಯಾಸ್ ಬುಕ್ಕಿಂಗ್ ಸೌಲಭ್ಯವನ್ನು ಪ್ರಯೋಗಾರ್ಥವಾಗಿ ಸೀಮಿತ ಪ್ರದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ.ಈ ಸೇವೆಯನ್ನು ಭಾರತದ ಎಲ್ಲಾ ರಾಜ್ಯಗಳಿಗೆ ವಿಸ್ತರಿಸಲಾಗುವುದು.

ಬೆಂಗಳೂರು ಸೇರಿದಂತೆ ಹೈದರಾಬಾದ್, ಚೆನ್ನೈ ಹಾಗೂ ಕೊಚ್ಚಿಯಲ್ಲಿ ಗೃಹೋಪಯೋಗಿ ಅನಿಲ ಇಂಧನ ಪೂರೈಕೆಯನ್ನು ದಿನವಿಡಿ ನೀಡುವ ಯೋಜನೆ ಕೂಡ ಇದೆ ಎಂದು ಪ್ರಾಂತೀಯ ವ್ಯವಸ್ಥಾಪಕ ಕುರಿಯನ್ ಪಿ ಚಂಡಿ ಹೇಳಿದರು.

ದಕ್ಷಿಣ ವಲಯದಲ್ಲಿ ಬಿಪಿಸಿಎಲ್ ಸುಮಾರು 450 ವಿತರಣಾ ಕೇಂದ್ರಗಳನ್ನು ಹೊಂದಿದೆ. ಇನ್ನೂ 150 ಕೇಂದ್ರಗಳ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X