• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕಾದಲ್ಲಿನ ಭಾರತೀಯ ದಂಪತಿಗಳಿಗೆ ತವರತ್ತ ಸೆಳೆತ

By Staff
|

ಬೆಂಗಳೂರು , ಸೆಪ್ಟೆಂಬರ್ 11 : ಕಾಲಬದಲಾಗಿದೆ. ಹವಾಮಾನ ಉಲ್ಟಾ ಪಲ್ಟಾ ಆಗುತ್ತಿದೆ. ಜಾಗತಿಕ ಔದ್ಯೋಗಿಕ ಪರಿಸರದಲ್ಲಿ ಯಾವುದು ಇಂದ್ರನ ಆಸ್ಥಾನವೆಂದು ಪರಿಗಣಿಸಲಾಗಿತ್ತೋ, ಅದಿಂದು ಕೇವಲ ಒಂದು ಹೋಟೆಲಿನ ಕೋಣೆಯಂತೆ ಕ್ಷಣಭಂಗುರದಂತೆ ಗೋಚರಿಸುತ್ತಿದೆ. ಹಾಗಾಗಿ ಅವಕಾಶಗಳ ಅಮರಾವತಿ ಅಮೆರಿಕಾ ಎಂಬ ಮೋಂಬತ್ತಿ ಕ್ರಮೇಣ ಕರಗುತ್ತಿದೆ!

ಈ ಮೇಲಿನ ವ್ಯಾಖ್ಯಾನಕ್ಕೆ ಪೂರಕವಾಗುವ ವರ್ತಮಾನವೊಂದು ಬಂದಿದೆ.ಅದು ಇಂತಿದೆ : ಈಗೀಗ ಅಮೆರಿಕಾದಿಂದ ಭಾರತಕ್ಕೆ ವಾಪಸ್ಸಾಗುತ್ತಿರುವ ಐಟಿ ವೃತ್ತಿಪರರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಈ ವಿದ್ಯಮಾನಕ್ಕೆ ಮುಖ್ಯ ಕಾರಣವೆಂದರೆ ಮಲ್ಟಿ ನ್ಯಾಷನಲ್‌ ಕಂಪನಿಗಳು ತಮ್ಮ ನೆಲೆಗಳನ್ನು ವಿಸ್ತರಿಸಿಕೊಳ್ಳುವಾಗ ಅವುಗಳ ಕಣ್ಣು ಮೊದಲು ಭಾರತದತ್ತ ಹೊರಳುತ್ತಿವೆ. ಅದೇ ಕಾರಣದಿಂದಾಗಿ ಅಮೆರಿಕಾಗೆ ಹೋಗಿದ್ದ ನಮ್ಮ ಐಟಿ ಪಂಟರುಗಳು ತಾಯ್ನಾಡಿಗೆ ಸಂತೋಷದಿಂದಲೇ ಮರಳುತ್ತಿದ್ದಾರೆ. ಯಾಕೆಂದರೆ, ಭಾರತದಲ್ಲೂ ಅವರಿಗೆ ಹೆಚ್ಚಿಗೆ ಸಂಬಳ ದೊರೆಯುತ್ತದೆ ಎನ್ನುತ್ತದೆ ಒಂದು ವೃತ್ತಿಪರ ಸಂಸ್ಥೆಯು ಅಮೆರಿಕಾದಲ್ಲಿ ನಡೆಸಿದ ಸಮೀಕ್ಷೆ.

ಈ ಸಮೀಕ್ಷೆಯನ್ನು ಕೈಗೊಂಡದ್ದು ಅಮೆರಿಕಾದಲ್ಲಿರುವ ಭಾರತೀಯ ಐಟಿ ವೃತ್ತಿಪರರ ಸಂಸ್ಥೆ ಇಂಡಸ್‌ ಎಂಟರ್‌ಪ್ರೈಸಸ್‌. ಮೇಲೆ ತಿಳಿಸಿದ ವಿದ್ಯಮಾನಗಳ ಫಲವಾಗಿ ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ವಾಪಸಾಗಿರುವವರ ಸಂಖ್ಯೆ 60.000 ದಾಟಿದೆ ಎಂದು ಕ್ಲಿಕ್‌ಜಾಬ್ಸ್‌.ಕಾಂನ ನೇಮಕಾತಿ ವಿಭಾಗದ ಮುಖ್ಯಸ್ಥ ಮೈಖೇಲ್‌ ಎಂ. ಬಾಲ ತಿಳಿಸಿದ್ದಾರೆ.

27ರಿಂದ 35ವರ್ಷ ವಯೋಮಿತಿಯಲ್ಲಿರುವ ಅಮೆರಿಕಾ ವಾಸಿ ದಂಪತಿಗಳು, ಭಾರತಕ್ಕೆ ವಾಪಸಾಗುವ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

ಭಾರತಕ್ಕೆ ಮರಳಬೇಕು ಎಂದು ಇಷ್ಟಪಡುತ್ತಿರುವ ಯುವ ದಂಪತಿಗಳ ಮುಖ್ಯ ಉದ್ದೇಶವೆಂದರೆ, ತಮ್ಮ ಮಕ್ಕಳನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ರಕ್ಷಿಸುವುದು ಮತ್ತು ಭಾರತೀಯ ಪರಿಸರದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದೇ ಅವರ ಬದಲಾದ ಆಲೋಚನಾ ಕ್ರಮದ ಮುಖ್ಯ ಪ್ರೇರಣೆಯಾಗಿದೆ.

ಮೂಲಭೂತ ಸೌಕರ್ಯಗಳು, ಉದ್ಯೋಗಾವಕಾಶಗಳು ಹಾಗೂ ಸಂಬಳ ಸಾರಿಗೆ ಈ ಹೊತ್ತು ಎರಡೂ ದೇಶಗಳಲ್ಲಿ ಹೆಚ್ಚೂ ಕಡಿಮೆ ಒಂದೇ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ, ತಾವು ಮಕ್ಕಳ ಸಮೇತ ಭಾರತಕ್ಕೆ ಹೋಗಿ ಅಲ್ಲೇ ನೆಲೆಸಿ ಜೀವನ ಏಕೆ ನಡೆಸಬಾರದು? ಎನ್ನುವ ಆಲೋಚನೆ ಅನೇಕ ದಂಪತಿಗಳಿಗೆ ತಲೆಹೊಕ್ಕಿದೆ.

ಅಮೆರಿಕಾದ ನ್ಯೂಜರ್ಸಿಯಲ್ಲಿ ಇತ್ತೀಚೆಗೆ ಒಂದು ಉದ್ಯೋಗ ಮೇಳ ಜರುಗಿತು. ಅಲ್ಲಿ ಭಾಗವಹಿಸಿದ್ದ ಬಹುತೇಕ ಭಾರತೀಯರು ಭಾರತದಲ್ಲಿ ಸಿಗುವ ಉದ್ಯೋಗ ಅವಕಾಶಗಳನ್ನು ಆಯ್ಕೆ ಮಾಡಿಕೊಳ್ಳಲು ಉತ್ಸುಕರಾಗಿದ್ದುದು ಕಂಡು ಬಂತು ಎಂದು ಕ್ಲಿಕ್‌ಜಾಬ್ಸ್‌.ಕಾಂನ ಬಾಲ ಹೇಳಿದ್ದಾರೆ.

ಅನೇಕ ಎಂಎನ್ಸಿ ಕಂಪನಿಗಳು ಭಾರತದಲ್ಲಿ ತಳವೂರುತ್ತಿರುವುದರಿಂದ ತಾವೂ ಭಾರತಕ್ಕೆ ವಾಪಸ್ಸಾಗಿ ಅಲ್ಲೇ ಏಕೆ ನೌಕರಿ ಮಾಡಬಾರದು ಎನ್ನುವುದು ನಮ್ಮ ಐಟಿ ಉದ್ಯೋಗಿಗಳ ಆಲೋಚನೆ. ಪ್ರತಿಭಾವಂತರಿಗೆ ಅಮೆರಿಕಾವೊಂದೆ ದಾರಿ , ಅವಕಾಶಗಳ ಅಮರಾವತಿ ಅಮೆರಿಕಾ ಮಾತ್ರ ಎಂಬ ಭ್ರಮೆ ಅವರ ಮಂಡೆಯಿಂದ ಕಳಚಿ ಉದುರುತ್ತಿದೆ.

ನ್ಯೂಜೆರ್ಸಿಯ ಉದ್ಯೋಗ ಮೇಳದಲ್ಲಿ ಕಂಡುಬಂದ ಇನ್ನೊಂದು ಅಂಶವೆಂದರೆ, ಯಾಹೂ, ಕ್ಯಾನನ್‌, ಐಬಿಎಂ ಮತ್ತು ಎಚ್‌ಪಿ ಕಂಪನಿಯ ಭಾರತೀಯ ಕಚೇರಿಗಳಲ್ಲಿ ಕೆಲಸಮಾಡಲು ಸುಮಾರು 3000 ಅಮೆರಿಕಾವಾಸಿ ಭಾರತೀಯರು ಆಸಕ್ತಿ ತೋರಿಸಿದರು. ಅವರಲ್ಲಿ ಬಹುತೇಕ ಮಂದಿ ಯುವಕರು, ಮದುವೆಯಾದವರು, ಒಂದೋ ಎರಡೋ ಮಕ್ಕಳನ್ನು ಪಡೆದವರು.

ಉದ್ಯೋಗಮೇಳದ ಭಾರಿ ಯಶಸ್ಸಿನಿಂದ ಪುಳಕಿತರಾಗಿರುವ ಇಂಡಸ್‌ ಎಂಟರ್‌ಪ್ರೈಸಸ್‌ ಇಂಥದೇ ಇನ್ನೊಂದು ಉದ್ಯೋಗ ಮೇಳವನ್ನು ಇನ್ನು ಆರು ತಿಂಗಳ ಒಳಗಾಗಿ ಅಮೆರಿಕಾದಲ್ಲಿ ಹಮ್ಮಿಕೊಳ್ಳಲು ಹವಣಿಸುತ್ತಿದೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more