• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವರುಗಳ ಬೆತ್ತಲು ಮಾಡಿದ ಹುಸೇನ್ ಬಂಧನಕ್ಕೆ ವಾರೆಂಟ್

By Staff
|

ವಿವಾದಾತ್ಮಕ ಕಲಾವಿದ ಎಂ.ಎಫ್.ಹುಸೇನ್‌ ಬಂಧನಕ್ಕೆ, ಜಾಮೀನು ರಹಿತ ವಾರೆಂಟನ್ನು ಮಂಗಳವಾರ ಜಾರಿಮಾಡಲಾಗಿದೆ. ಮಹಾರಾಷ್ಟ್ರದಲ್ಲಿನ ಪಂಡಾರ್ಪುರ ಕೋರ್ಟ್ ಇದನ್ನು ಜಾರಿಗೊಳಿಸಿದೆ.

ಎಂ.ಎಫ್.ಹುಸೇನ್ ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿ, ಆ ಮೂಲಕ ಮತೀಯಭಾವನೆಗಳಿಗೆ ದಕ್ಕೆಯಾಗುವಂತೆ ನಡೆದುಕೊಂಡಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ, ಸ್ಥಳೀಯ ನ್ಯಾಯಾಲಯ ಆದೇಶವನ್ನು ಜಾರಿಮಾಡಿದೆ. ಪ್ರಸ್ತುತ ಲಂಡನ್‌ನಲ್ಲಿರುವ ಹುಸೇನ್ ಈ ತಿಂಗಳ 17ಕ್ಕೆ ಭಾರತಕ್ಕೆ ಬರಲಿದ್ದಾರೆ.

***

ಫ್ರೈ ಓವರ್ ಕುಸಿತದ ಪರಿಣಾಮ ಕಂಪನಿಗೆ ಸಂಕಷ್ಟ

ಹೈದರಾಬಾದ್‌ನಲ್ಲಿ ನೆಲಕಚ್ಚಿದ ಫ್ಲೈಓವರ್‌ಗೂ ಮುಂಬೈನಲ್ಲಿ ಕುಸಿದ ಸ್ಟಾಕ್ ಮಾರ್ಕೆಟ್‌ಗು ಎತ್ತಣಿಂದೆತ್ತ ಸಂಬಂಧ ಎನ್ನುತ್ತೀರಾ? ಅಲ್ಲಿ ಫ್ಲೈಓವರ್‌ನ್ನು ನಿರ್ಮಿಸಿದ್ದು ಗಮೋನ್ ಇಂಡಿಯಾ ಎಂಬ ಸಂಸ್ಥೆ.

ಹೈದರಾಬಾದ್‌ನಲ್ಲಿ ಸಂಭವಿಸಿದ ಫ್ಲೈಓವರ್ ದುರಂತದಲ್ಲಿ ಇಬ್ಬರು ಮೃತಪಟ್ಟು ಸುಮಾರು ಜನ ಗಾಯಗೊಂಡಿದ್ದರು. ಆ ಫ್ಲೈಓವರನ್ನು ನಿರ್ಮಿಸಿದ್ದು ಗಮೋನ್ ಇಂಡಿಯಾ ಎಂಬ ನಿರ್ಮಾಣ ಸಂಸ್ಥೆ. ಈಗ ಅದರ ಷೇರುಗಳು ಮುಂಬೈನ ಸ್ಟಾಕ್ ಮಾರ್ಕೆಟ್‌ನಲ್ಲಿ ಶೇ. 8.78ರಷ್ಟು ಕುಸಿತ ಕಂಡಿವೆ.

ಹೈದರಾಬಾದಿನ ಫ್ಲೈಓವರ್‍ ಗುತ್ತಿಗೆದಾರರು ಗಮೋನ್ ಇಂಡಿಯಾ ಆದ್ದರಿಂದ, ಅದರ ಷೇರುಗಳು ಬೆಲೆ ಕಳೆದುಕೊಳ್ಳುತ್ತಿವೆ. ಈ ಸಂಸ್ಥೆಯ ಬಗ್ಗೆ ಹಲವಾರು ಅಪವಾದಗಳಿದ್ದರೂ ಫ್ಲೈಓವರ್ ನಿರ್ಮಾಣವನ್ನು ಇವರಿಗೆ ಒಪ್ಪಿಸಿದ್ದು ದುರಂತಕ್ಕೆ ಕಾರಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

***

ಬೆಂಗಳೂರಿಗೆ ಬಲ್ಗೇರಿಯಾ ಪ್ರಧಾನಿ

ಬಲ್ಗೇರಿಯಾ ಪ್ರಧಾನ ಮಂತ್ರಿ ಸೆರ್ಗೆ ಸ್ಟಾನಿಶೆವ್ ಅವರು ಸೆಪ್ಟೆಂಬರ್ 13 ಹಾಗೂ 14ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಸೆಪ್ಟೆಂಬರ್ 13ರಂದು ಮಧ್ಯಾಹ್ನ 12.30 ಗಂಟೆಗೆ ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

***

ಉದ್ಯೋಗ ಮೇಳ

ಬೆಂಗಳೂರಿನ ಐ.ಸಿ.ಐ.ಸಿ.ಐ..ಪ್ರೊಡೆನ್ಸಿಯಲ್ ಲೈಫ್ ಇನ್ಸೂರೆನ್ಸ್ ಸಂಸ್ಥೆ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆಯ ಉದ್ಯೋಗ ವಿಭಾಗದ ಸಹಯೋಗದೊಂದಿಗೆ ಸೆಪ್ಟೆಂಬರ್ 20ರಂದು ಬೆಳಿಗ್ಗೆ 9 ರಿಂದ 2ಗಂಟೆವರೆಗೆ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ, ಐ.ಟಿ.ಐ. ಆವರಣ, ಹೊಸೂರು ರಸ್ತೆ, ಬೆಂಗಳೂರು ಇಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ರಿಕ್ರೂಟ್‌ಮೆಂಟ್ ಆಫೀಸರ್ಸ್ ಹಾಗೂ ಪೈನಾನ್ಸಿಯಲ್ ಅಡ್ವೈಸರ್‍ಸ್ ಹುದ್ದೆಗೆ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಹೊಂದಿರುವಂತಹ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಜ್ಞಾನ ಇರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

***

ಪಿಯುಸಿ ಪರೀಕ್ಷೆ : 10ಅಂಕಗಳ ಆಂತರಿಕ ಮೌಲ್ಯಮಾಪನ ರದ್ದು

ಪದವಿಪೂರ್ವ ಶಿಕ್ಷಣದಲ್ಲಿ ಶೈಕ್ಷಣಿಕ ವರ್ಷಗಳಿಗೆ ಅನ್ವಯವಾಗುವಂತೆ ಪದವಿಪೂರ್ವ ಶಿಕ್ಷಣ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಪ್ರಾಯೋಗಿಕ ಪರೀಕ್ಷೆ ಇರುವ ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ೧೦ ಅಂಕಗಳ ಆಂತರಿಕ ಮೌಲ್ಯಮಾಪನವನ್ನು ರದ್ದುಪಡಿಸಲಾಗಿದೆ.

ಪ್ರಾಯೋಗಿಕ ಪರೀಕ್ಷೆ ಇರುವ ವಿಜ್ಞಾನ ವಿಷಯಗಳಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. 10ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ಇರುತ್ತದೆ. 90 ಅಂಕಗಳಿಗೆ ಪ್ರಶ್ನೆಪತ್ರಿಕೆ ಇರುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

***

ಡಿ ಫಾರ್ಮ ಭಾಗ ಪರೀಕ್ಷೆಯ ಫಲಿತಾಂಶ ಪ್ರಕಟ

ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯವು ಕಳೆದ ಜುಲೈನಲ್ಲಿ ನಡೆಸಿದ ಡಿ.ಫಾರ್ಮ ಪರೀಕ್ಷೆಯ ಫಲಿತಾಂಶವನ್ನು ಸೆಪ್ಟೆಂಬರ್ 10ರಂದು ಸಂಜೆ 5ಗಂಟೆಗೆ ಪರೀಕ್ಷಾ ಪ್ರಾಧಿಕಾರ ಮಂಡಳಿ, ಸುಬ್ಬಯ್ಯ ವೃತ್ತ, ಪಿ. ಕಾಳಿಂಗರಾವ್ ರಸ್ತೆ, ಬೆಂಗಳೂರು ಇಲ್ಲಿ ಪ್ರಕಟಿಸಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರ ಮಂಡಳಿಯ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more