ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30ಲಕ್ಷ ಮೌಲ್ಯದ ನಕಲಿ ನೋಕಿಯಾ ಹ್ಯಾಂಡ್ ಸೆಟ್ ಪತ್ತೆ

By Staff
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10 : ನಗರದ ನಕಲಿ ಮೊಬೈಲ್ ಮಾರಾಟದ ಜಾಲವನ್ನು ಸಿಸಿಬಿ ಪೊಲೀಸರು ಸೋಮವಾರ ಪತ್ತೆಹಚ್ಚಿದ್ದಾರೆ. ಅಸಲಿ ನೋಕಿಯಾ ಮೊಬೈಲ್ ಹ್ಯಾಂಡ್ ಸೆಟ್ ಗಳ ತಲೆ ಮೇಲೆ ಹೊಡೆದಂತಿರುವ ನಕಲಿ ಮೊಬೈಲ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ.

ಪೊಲೀಸ್ ಕಮಿಷನರ್ ನೀಲಂ ಅಚ್ಯುತ ರಾವ್ ಇಂದು ಸುದ್ದಿಗಾರರಿಗೆ ಈ ಬಗ್ಗೆ ವಿವರ ನೀಡಿದ್ದಾರೆ. ಹ್ಯಾಂಡ್ ಸೆಟ್ ಗಳನ್ನು 8ಸಾವಿರದಿಂದ 10ಸಾವಿರ ರೂ. ತನಕ ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇವುಗಳ ತಯಾರಿಕೆ ಚೀನಾದಲ್ಲಿ ಆಗಿರಬಹುದೆಂದು ಶಂಕಿಸಲಾಗಿದೆ. ಒಳ್ಳೆ ಸ್ಥಿತಿಯಲ್ಲಿರುವ ನೋಕಿಯಾ ಸಾಫ್ಟ್ ವೇರ್ ಇವರಿಗೆ ಹೇಗೆ ಸಿಕ್ಕಿತು ಎಂಬ ಬಗ್ಗೆಯೂ ತನಿಖೆ ನಡೆದಿದೆ ಎಂದು ಅವರು ವಿವರ ನೀಡಿದ್ದಾರೆ.

ಗಾಂಧಿ ನಗರದ ಬರ್ಮಾ ಬಜಾರ್, ನ್ಯೂ ಹಾಂಗ್ ಕಾಂಗ್ ಬಜಾರ್ ಮೇಲೆ ದಾಳಿ ಮಾಡಿ 30ಲಕ್ಷ ಮೌಲ್ಯದ ನಕಲಿ ನೋಕಿಯಾ ಮೊಬೈಲ್ ಗಳನ್ನು ಡಿಸಿಪಿ ರವಿಕಾಂತೇ ಗೌಡ ನೇತೃತ್ವದ ಸಿಸಿಬಿ ಪೊಲೀಸರು ವಶಪಡಿಸಿಕೊಂಡರು. ಎನ್-73 ಮತ್ತು ಎನ್-95ಸೇರಿದಂತೆ ನೋಕಿಯಾದ ವಿವಿಧ ಮಾದರಿಯ ನಕಲಿ ಫೋನ್ ಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಪ್ರಕಾಶ್ ಅಲಿಯಾಸ್ ಮನೋಹರ್ ಲಾಲ್, ಸುಲೇಮನ್ ಮಹಮದ್ ಇಲಿಯಾಸ್, ಖಾಲೀದ್ ಅಲಿಯಾಸ್ ಕಮಲ್ ಬಾಷಾ, ಮನ್ಸೂರ್ ಅಲಿಯಾಸ್ ಅಜಂ ಆಲಿ ಬಂಧಿತ ಆರೋಪಿಗಳು. ಕಿಶೋರ್ ಮತ್ತು ಮಹಮದ್ ನಾಜೀರ್ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X