ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಿರತ ಪ್ರಯತ್ನ ; ಥಟ್ ಅಂತ ಹೇಳಲು ಬಂದ ಐಟಿ ಮಂದಿ

By Staff
|
Google Oneindia Kannada News

Written test for entry to Chandana's 'Thhat anta heli'program conducted today(Sep.9) morning in bangalore and mysoreಬೆಂಗಳೂರು, ಸೆಪ್ಟೆಂಬರ್ 09 : ಚಂದನ ವಾಹಿನಿಯ 'ಥಟ್ ಅಂತ ಹೇಳಿ' ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಯಕೆಯಿಂದ ಐಟಿ, ಬಿಟಿ ಮತ್ತು ಐಟಿಇಎಸ್ ಉದ್ಯೋಗಿಗಳು ಉತ್ಸಾಹದಿಂದ ಪ್ರವೇಶ ಪರೀಕ್ಷೆಯನ್ನು ಭಾನುವಾರ ಬರೆದರು.

ಅವಿರತ, ಐಡಿ ಟೆಕ್ನಾಲಜೀಸ್ ಸಹಯೋಗದೊಂದಿಗೆ ಮತ್ತು ದೂರದರ್ಶನ ಜಂಟಿಯಾಗಿ ಈ ರಸಪ್ರಶ್ನೆಯನ್ನು ಆಯೋಜಿಸಿವೆ. ಈ ಸಂಬಂಧಿ ಪ್ರವೇಶ ಪರೀಕ್ಷೆ, ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಮತ್ತು ಮೈಸೂರಿನಲ್ಲಿ ಏಕಕಾಲಕ್ಕೆ ನಡೆದಿವೆ.

ಪ್ರಮುಖವಾಗಿ ಸಿಜಿಐ ಕಂಪನಿಯ 10 ತಂಡ, ಇನ್ಫೋಸಿಸ್, ವಿಪ್ರೋ, ಗ್ರೇನಿಯಂ, ನೋಕಿಯಾ ಸೇರಿದಂತೆ 27ಕಂಪನಿಗಳ, 52 ತಂಡಗಳ 104ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಇತಿಹಾಸ, ಸಾಹಿತ್ಯ,ಗಣ್ಯವ್ಯಕ್ತಿಗಳು, ಭೂಗೋಳ, ಕ್ರೀಡೆ ಹೀಗೆ ಕನ್ನಡ ಮತ್ತು ಕರ್ನಾಟಕ ಸಂಬಂಧಿ ಪ್ರಶ್ನೆಗಳು ಪರೀಕ್ಷೆಯಲ್ಲಿದ್ದವು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಥಟ್ ಅಂಥ ಹೇಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅವಿರತ ಸಂಘಟನೆಯ ಅಧ್ಯಕ್ಷ ಸತೀಶ್ ಗೌಡ ಮತ್ತು ಅವಿರತದ ಗುರು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಇದನ್ನೂ ಓದಿ :

ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಬನ್ನಿ, ಬಹುಮಾನ ಗೆಲ್ಲಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X