ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೊಸ ಸೂತ್ರ ಅಂದ್ರೆ ರೇವಣ್ಣ ಡೆಪ್ಯೂಟಿ ಸಿಎಂ ಆಗೋದಾ?
ಬೆಂಗಳೂರು, ಸೆಪ್ಟೆಂಬರ್ 06 : ದಿನಗೊಂದು ಬಣ್ಣ, ದಿನಗೊಂದು ಆಟ, ಏನೇನೋ ವೇಷ, ಮಾತಲ್ಲಿ ಮೋಸ? ಅನ್ನೋ ಹಾಡು, ಸದ್ಯದ ರಾಜ್ಯ ರಾಜಕಾರಣ ನೋಡುತ್ತಿದ್ದರೆ ನೆನಪಾಗುತ್ತದೆ!
ಅಧಿಕಾರ ಸಿಗುತ್ತೋ ಇಲ್ವೋ ಎಂಬ ಚಿಂತೆಯಲ್ಲಿ ಮುಳುಗಿರುವ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಸಚಿವ ಹೆಚ್.ಡಿ.ರೇವಣ್ಣ ಭೇಟಿ ನೀಡಿದ್ದು, ಹತ್ತಾರು ಪ್ರಶ್ನೆಗಳ ಹುಟ್ಟಿ ಹಾಕಿದೆ.
ಇಬ್ಬರ ನಡುವೆ ಸುಮಾರು ಮುಕ್ಕಾಲು ಗಂಟೆ ಮಾತುಕತೆ ನಡೆದಿದ್ದು, ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಹೊಸ ಸೂತ್ರದ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಏನದು ಹೊಸ ಸೂತ್ರ, ಕುಮಾರಸ್ವಾಮಿ ಜಾಗದಲ್ಲಿ ರೇವಣ್ಣ ಮುಂದುವರೆಯುವುದೇ? ಯಡಿಯೂರಪ್ಪ ಮುಖ್ಯಮಂತ್ರಿಯಾಗಿ, ರೇವಣ್ಣ ಉಪಮುಖ್ಯಮಂತ್ರಿಯಾಗುವುದೇ? ಸದ್ಯಕ್ಕೆ ಯಾರೂ ಬಾಯಿಬಿಡುತ್ತಿಲ್ಲ.
(ದಟ್ಸ್ ಕನ್ನಡ ವಾರ್ತೆ)
Story first published: Thursday, September 6, 2007, 5:30 [IST]