ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನೀಯರನ್ನೂ ಬಿಡದ ಇಂಗ್ಲಿಷ್ ಮೋಹ!

By Staff
|
Google Oneindia Kannada News

ಇಂಗ್ಲಿಷ್ ಭಾಷೆಯ ವ್ಯಾಮೋಹ ಯಾರನ್ನೂ ಬಿಟ್ಟಿಲ್ಲ. ಹಾಗಾಗಿ ಈಗ ಚೀನೀಯರೂ ಚಿಂಗ್ಲಿಷ್ ಅಲ್ಲಲ್ಲ, ಇಂಗ್ಲಿಷ್ ಭಾಷೆ ಕಲಿಕೆಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಅಲ್ಲಿ ಓರಿಯಂಟ್ ಲಾಂಗ್ ಮನ್‌ನ ಇಂಗ್ಲಿಷ್ ಕಲಿಸುವ 44 ಪುಸ್ತಕಗಳು ಬಿಸಿ ದೋಸೆಯಂತೆ ಖರ್ಚಾಗುತ್ತಿವೆ.

***

ಬಾಯಿಗೆ ಸಿಹಿ ಬೇಕಾ?

ಕೊಯಂಬತ್ತೂರಿನ ಪ್ರಸಿದ್ಧ ಸಿಹಿ ತಿನಿಸುಗಳ ಮಾರಾಟ ಮಳಿಗೆ ಕೃಷ್ಣ ಸ್ವೀಟ್ಸ್‌, ಈಗ ಬೆಂಗಳೂರಿಗೆ ಕಾಲಿಟ್ಟಿದೆ! ಅಂದರೆ ಇಲ್ಲಿನ ಬಿಗ್‌ಬಜಾರ್ ಮತ್ತು ಫುಡ್ ಬಜಾರ್ ಗಳಲ್ಲಿ ಕೃಷ್ಣ ಸ್ವೀಟ್ಸ್ ನ ಸಿಹಿತಿನಿಸುಗಳ ಲಭ್ಯ.

ಬಿಗ್ ಬಜಾರ್ ನಂತಹ ಚಿಲ್ಲರೆ ವ್ಯಾಪಾರ ಮಳಿಗೆಗಳಲ್ಲಿ ನಮ್ಮ ಸಿಹಿ ತಿನಿಸುಗಳನ್ನು ಮಾರಾಟ ಮಾಡುವುದರಿಂದ, ಬಹಳಷ್ಟು ಮಂದಿಗೆ ತಲುಪುತ್ತವೆ ಎಂದು ಅದರ ಅಧ್ಯಕ್ಷರಾದ ಎಂ.ಕೃಷ್ಣನ್ ತಿಳಿಸಿದ್ದಾರೆ.

***

ಕ್ರೊಕೊಡೈಲ್ ಹಂಟರ್ ಸ್ಮರಣೆ

ಕ್ರೊಕೊಡೈಲ್ ಹಂಟರ್ ಸ್ಟೀವ್ ಇರ್ವಿನ್‌ರ ಪ್ರಥಮ ಸಂಸ್ಮರಣೆ ಕಾರ್ಯಕ್ರಮ ಆಸ್ಟ್ರೇಲಿಯಾದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅವರ ಪತ್ನಿ, ಮಕ್ಕಳು ಹಾಗೂ ಕೆಲವು ಗಣ್ಯರು ಭಾಗವಹಿಸಿದ್ದರು.

***

ರಾಕ್ ಗಾಯಕರ ಸಾವುಗಳು

ಮಾದಕ ವ್ಯಸನಕ್ಕೆ ಬಲಿಯಾದ ರಾಕ್ ಗಾಯಕರು ಮಧ್ಯ ವಯಸ್ಸಿನಲ್ಲಿಯೇ ಸಾವನಪ್ಪುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ. ಹೆಂಡ್ರಿಕ್ಸ್, ಬೋನ್, ಸ್ಕಾಟ್ ಮತ್ತು ಸಿಡ್ ವಿಶಿಯಸ್ ತಮ್ಮ ಐದನೆಯ ವರ್ಷದ ಯಶಸ್ಸಿನ ತುತ್ತ ತುದಿಯಲ್ಲಿದ್ದಾಗಲೇ ಸಾವನಪ್ಪಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X