ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲಲ್ಲಿ ಮಾತಾಡಿದ್ದು ಸಾಕು, ಸ್ವಲ್ಪ ಇತ್ತ ನೋಡಿ!

By Super
|
Google Oneindia Kannada News

ನವದೆಹಲಿ, ಆಗಸ್ಟ್ 04 : ಕಿವಿಗೆ ಮೊಬೈಲ್ ಕಚ್ಚಿಸಿಕೊಂಡು ಸುತ್ತುವುದು ಈಗಿನ ಫ್ಯಾಷನ್! ಫ್ಯಾಷನ್ ಎನ್ನುವುದಕ್ಕಿಂತಲೂ ನಾವೇ ಅಭ್ಯಾಸ ಮಾಡಿಕೊಂಡ ಜೀವನ ಪದ್ಧತಿ! ಆ ವಿಚಾರ ಬಿಡಿ.

ಈಗ ಮೊಬೈಲ್ ಗ್ರಾಹಕರು ಆತಂಕ ಪಡಬೇಕಾದ ವಿಚಾರವೊಂದು ಬೆಳಕಿಗೆ ಬಂದಿದೆ. ಬಣ್ಣಬಣ್ಣದ, ವಿವಿಧ ಪ್ರಯೋಜನಗಳ ಮೊಬೈಲ್ ಹ್ಯಾಂಟ್ ಸೆಟ್ ಗಳನ್ನು ಕೈಯಲ್ಲಿ ಹಿಡಿದು ಬೀಗುವ ಮಂದಿ, ಈ ಸಂಗತಿಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಚಂಡಿಗಡದ ಗ್ರಾಜ್ಯುಯೇಟ್ ಇನ್ ಸ್ಟಿಟ್ಯೂಟ್ ಅಧ್ಯಯನ ಮೊಬೈಲ್ ನ ಅಡ್ಡ ಪರಿಣಾಮವನ್ನು ವಿವರಿಸಿದೆ. ದಿನಕ್ಕೆ ನಾಲ್ಕು ಗಂಟೆ, ಅದರಲ್ಲೂ ಸುದೀರ್ಘ 30ನಿಮಿಷಕ್ಕೂ ಹೆಚ್ಚು ಕಾಲ ಮೊಬೈಲ್ ನಲ್ಲಿ ಮಾತನಾಡುವುದು ತಪ್ಪು. ಅಪಾಯಕ್ಕೆ ಆಹ್ವಾನ.

ಉದ್ದದ ಸುದೀರ್ಘ ಕರೆಗಳಿಗೆ ಉತ್ತರಿಸುವ ಮಂದಿ ಕಿವುಡರಾಗುವ ಸಾಧ್ಯತೆಗಳು ತುಂಬಾ ಜಾಸ್ತಿ. ಶಕ್ತಿಶಾಲಿ ಧ್ವನಿ ತರಂಗಾಂತರಗಳು ಮಾಡುವ ಹಾನಿ ಬಗ್ಗೆ ನಾವು ಉದಾಸೀನತೆ ತೋರಬಾರದು!

English summary
According to a recent study conducted by Post Graduate Institute of Medical Education and Research at Chandigarh, people using mobile phones for more than four years and longer than 30 minutes a day are at risk of developing hearing loss particularly at higher speech frequencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X