• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಿತ್ರ ದ್ರೋಹ : ಮೈಸೂರಿನ ಉದ್ಯಮಿ ಮೇಲೆ ಆಸಿಡ್ ದಾಳಿ

By Staff
|


ಮೈಸೂರು, ಸೆಪ್ಟೆಂಬರ್ 04 : ಪ್ರೀತಿ ಮಾಡಲಿಲ್ಲ ಅಂದರೂ ಆಸಿಡ್! ಸಾಲ ವಾಪಸ್ ಕೇಳಿದರೂ ಆಸಿಡ್! ಎಲ್ಲಕ್ಕೂ ಆಸಿಡ್ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ!

ಇತ್ತೀಚೆಗಷ್ಟೇ ಹೀನಾ ಫಾತೀಮಾ ಆಸಿಡ್ ದಾಳಿಯಿಂದ ಮೈಸೂರಿನಲ್ಲಿ ಬಲಿಯಾಗಿದ್ದಳು. ಆ ಘಟನೆ ಮಾಸುವ ಮುನ್ನವೇ ನಗರದ ಉದ್ಯಮಿಯೊಬ್ಬರ ಮೇಲೆ ಆಸಿಡ್ ದಾಳಿ ನಡೆದಿದೆ. ಆಸೀಡ್ ಹಾಕಿದವ ಜೀವದ ಗೆಳೆಯ ಎಂಬುದು ಇಲ್ಲಿನ ವಿಶೇಷ. ಜೊತೆಗೆ ದುರಂತ!

ಇಬ್ಬರು ಮಿತ್ರರ ನಡುವಿನ ಹಣಕಾಸಿನ ವಿಚಾರ, ಕೊನೆಗೆ ಈ ಸ್ಥಿತಿ ತಲುಪಿದೆ. ಕುವೆಂಪು ನಗರದ ಸತೀಶ್ ಭಟ್ ದಾಳಿಗೆ ಒಳಗಾದವರು. ಅವರ ಸ್ನೇಹಿತ ಗೋಕುಲಂನ ನಿವಾಸಿ ಪ್ರಶಾಂತ್ ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸತೀಶ್ ಭಟ್ ಅವರ ಮುಖ ಮತ್ತು ಎದೆಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ : ಸತೀಶ್ ಭಟ್ ತಮ್ಮ ಸ್ನೇಹಿತ ಪ್ರಶಾಂತ್ ಗೆ ಇತ್ತೀಚೆಗೆ ಸಾಲ ಕೊಟ್ಟಿದ್ದರು. ಮರು ಪಾವತಿಗೆ ಆಗಾಗ ಒತ್ತಾಯ ಮಾಡುತ್ತಿದ್ದರು. ಆದರೆ ಪ್ರಶಾಂತ್ ಸಕಾಲಕ್ಕೆ ವಾಪಸ್ ನೀಡಲಿಲ್ಲ. ಮೊನ್ನೆ ಭಾನುವಾರ ರಾತ್ರಿ ಸತೀಶ್ ಭಟ್ ಅವರನ್ನು ಬನ್ನೂರಿಗೆ ಕರೆದೊಯ್ದ ಪ್ರಶಾಂತ್, ನೀರಹಳ್ಳ ಎಂಬಲ್ಲಿ ಕಾರು ನಿಲ್ಲಿಸಲು ಸೂಚಿಸಿದ. ನಂತರ ಏಕಾಏಕಿ ಆಸಿಡ್ ಹಾಕಿ, ಸತೀಶ್ ಭಟ್ ಅವರನ್ನು ಕಾರಿನಿಂದ ಹೊರ ತಳ್ಳಿದ ಎನ್ನಲಾಗಿದೆ.

ಹೇಗೋ ಮೈಸೂರಿಗೆ ಬಂದ ಸತೀಸ್ ಭಟ್, ತಮ್ಮ ಸಹೋದರನ ಮುಖಾಂತರ ಆಸ್ಪತ್ರೆ ಸೇರಿದ್ದಾರೆ. ಪ್ರಶಾಂತ್ ವಿರುದ್ಧ ಸೆಕ್ಷನ್ 307 ಮತ್ತು 392ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಸುಬ್ಬು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more