ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದಚೆಂದದ ಮೈಸೂರು ಸಿಲ್ಕ್ ಸೀರೆ ಖರೀದಿಸುವ ಮುನ್ನ..

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 31 : ನೀರೆಯರ ನೆಚ್ಚಿನ ಮೈಸೂರು ಸಿಲ್ಕ್ ಸೀರೆಯನ್ನು ಈಗ ಅಂತರ್ಜಾಲದ ಮುಖಾಂತರವೂ ಖರೀದಿಸಬಹುದು.

ಮೈಸೂರು ಸಿಲ್ಕ್ ಸೀರೆ ಮತ್ತು ಕೆಎಸ್ಐಸಿಯ ಇನ್ನಿತರ ಉತ್ಪನ್ನಗಳು ಅಂತರ್ಜಾಲದಲ್ಲೀಗ ಲಭ್ಯ. ಅಂತರ್ಜಾಲದ ಮುಖಾಂತರ ಜಾಗತಿಕ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಇಂಡಿಯಾ ಪ್ಲಾಜಾ ಜೊತೆ ಕೆಎಸ್ಐಸಿ ಒಪ್ಪಂದ ಮಾಡಿಕೊಂಡಿದೆ.

ಮೈಸೂರು ಸಿಲ್ಕ್ ಸೀರೆ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಗ್ರಾಹಕರೇ ಈಗ ಪರೀಕ್ಷೆ ಮಾಡಬಹುದು. ಜರಿ ಅನಲೈಸಿಂಗ್ ಯಂತ್ರವನ್ನು ನಗರದ ಎಂಜಿ ರಸ್ತೆಯ ಕೆಎಸ್ಐಸಿ ಮಳಿಗೆಯಲ್ಲಿ ಸ್ಥಾಪಿಸಲಾಗಿದ್ದು, ಗ್ರಾಹಕರು ಪ್ರಯೋಜನ ಪಡೆಯುವಂತೆ ಕೆಎಸ್ಐಸಿ ವ್ಯವಸ್ಥಾಪಕ ಪಿ.ವಿಜಯನ್ ಕೋರಿದ್ದಾರೆ.

ನಕಲಿ ಮೈಸೂರು ಸಿಲ್ಕ್ ಹಾವಳಿಯಿಂದ ಬೇಸತ್ತು, ಕೆಎಸ್ಐಸಿ ಜರಿ ಅನಲೈಸಿಂಗ್ ಯಂತ್ರವನ್ನು ಜರ್ಮನಿಯಿಂದ ತರಿಸಿಕೊಂಡಿದೆ. ಬೆಂಗಳೂರಿನ 70ಮಳಿಗೆಗಳಲ್ಲಿ ನಕಲಿ ಸೀರೆ ಮಾರಾಟ ನಡೆದಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಕೆಎಸ್ಐಸಿ ಮುಂದಾಗಿದೆ.

ಶೇ.78ರಷ್ಟು ನಕಲಿ ಸೀರೆಗಳು ಚೆನ್ನೈನಲ್ಲಿ, ಶೇ.60ರಷ್ಟು ಬೆಂಗಳೂರಿನಲ್ಲಿ ಮಾರಾಟವಾಗುತ್ತಿವೆ. ಗ್ರಾಹಕರು ಮೈಯೆಲ್ಲಾ ಕಣ್ಣಾಗಿದ್ದರೆ ಒಳ್ಳೆಯದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X