ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಕಿಯಾ ಮೊಬೈಲ್ ಫೋನ್ ಸಿಡಿದು ಗರ್ಭಿಣಿಗೆ ಗಾಯ!

By Staff
|
Google Oneindia Kannada News

ಕೊಲ್ಕತ್ತಾ, ಆಗಸ್ಟ್ 31 : ನೋಕಿಯಾ ಸಂಸ್ಥೆಯ ಮೊಬೈಲ್ ಗಳು ಅಲ್ಲಲ್ಲಿ ಸ್ಫೋಟಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸಂಸ್ಥೆ ವ್ಯಾಪಕ ಪ್ರಚಾರ ಕಾರ್ಯ ಕೈಗೊಂಡಿದ್ದು, ದೋಷದಿಂದ ಕೂಡಿದ ಬ್ಯಾಟರಿಗಳನ್ನು ಬದಲಾಯಿಸುತ್ತಿದೆ.

ಇತ್ತೀಚೆಗೆ 24 ವರ್ಷ ವಯಸ್ಸಿನ ಗರ್ಭಿಣಿ ಮಹಿಳೆಯೊಬ್ಬರ ಮನೆಯಲ್ಲಿ ನೋಕಿಯಾ ಮೊಬೈಲ್‍ನ ಬ್ಯಾಟರಿ ಸಿಡಿದಿದೆ. ಮೊಬೈಲ್ ಫೋನನ್ನು ಚಾರ್ಜ್ ಮಾಡುತ್ತಿರಬೇಕಾದರೆ ಹಠಾತ್ತನೆ ಸಿಡಿಯಿತು ಎನ್ನಲಾಗಿದೆ.

ಮೊಬೈಲನ್ನು ಚಾರ್ಜ್ ಗೆ ಇಟ್ಟು ಹತ್ತು ನಿಮಿಷವಾಗಿತ್ತು. ಅದು ಹಠಾತ್ತನೆ ಸಿಡಿದಿದ್ದರಿಂದ ಅಲ್ಲೇ ಕೆಲಸ ಮಾಡುತ್ತಿದ್ದ ನನ್ನ ಮುಖಕ್ಕೆ ಚೂರುಗಳು ಸಿಡಿದು ಸಣ್ಣಪುಟ್ಟ ಗಾಯಗಳಾಗಿವೆಯೆಂದು ಮಹಿಳೆ ತಿಳಿಸಿದ್ದಾರೆ. ಸ್ಪೋಟಗೊಂಡ ನೋಕಿಯಾ ಫೋನ್ ಸೆಟ್‍ನ ಸಂಖ್ಯೆ 2100. ಬ್ಯಾಟರಿ ಶ್ರೇಣಿ 3D.

ನೋಕಿಯಾ ಕಂಪನಿ ಈಗಾಗಲೆ ತನ್ನ BL-5C ಶ್ರೇಣಿಯ ಬ್ಯಾಟರಿಗಳನ್ನು ಹಿಂತಿರುಗಿಸಬೇಕೆಂದು ಪ್ರಕಟಿಸಿದೆ. ಪ್ರಪಂಚದಾದ್ಯಂತ ಮೊಬೈಲ್ ಬ್ಯಾಟರಿ ಸಿಡಿದ ನೂರು ಘಟನೆಗಳು ಸಂಭವಿಸಿವೆ. ನೋಕಿಯ ಕಂಪನಿ ಈ ವಿಚಾರವನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X