ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಪ್ರಭಾವಿ ಮಹಿಳೆಯರಲ್ಲಿ ಸೋನಿಯಾಗೆ 6ನೇ ಸ್ಥಾನ!

By Staff
|
Google Oneindia Kannada News

ವಾಷಿಂಗ್ಟನ್, [ಆಗಸ್ಟ್ 31] ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಫೋರ್ಬ್ಸ್ ಸಂಸ್ಥೆ ಪ್ರಕಟಿಸಿರುವ 100 ಅತೀ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಪೆಪ್ಸಿ ಕಂಪನಿಯ ಅಮೆರಿಕಾದ ಭಾರತೀಯ ಅಧ್ಯಕ್ಷೆಯಾದ ಇಂದಿರ ನೂಯಿ ಸಹ ಸ್ಥಾನವನ್ನು ಪಡೆದಿದ್ದಾರೆ.

ಜರ್ಮನಿಯ ಚಾನ್ಸಲರ್ ಆದ ಏಂಜೆಲ ಮಾರ್ಕೆಲ್ ಪ್ರಥಮ ಸ್ಥಾನದಲ್ಲಿದ್ದು, ಹಿಂದಿನ ತಮ್ಮ ಶ್ರೇಯಾಂಕವನ್ನು ಉಳಿಸಿಕೊಂಡಿದ್ದಾರೆ. ‘ತಮ್ಮ ಶಾಂತ ಮನೋಭಾವದ ನಾಯಕತ್ವವೇ ಅವರನ್ನು ಪ್ರಥಮ ಸ್ಥಾನದಲ್ಲಿರುವಂತೆ ಮಾಡಿದೆ’ ಎಂದು ಪತ್ರಿಕೆ ಪ್ರಕಟಿಸಿದೆ.

1990ರಲ್ಲಿ ರಾಜಕೀಯ ರಂಗಕ್ಕೆ ಆಗಮಿಸಿದ ಇಟಲಿ ಮೂಲದ ಸೋನಿಯ ಗಾಂಧಿ, ಭಾರತದಲ್ಲಿ ಪ್ರಭಾವಿ ಪಕ್ಷದ ನಾಯಕತ್ವವನ್ನು ವಹಿಸಿದ್ದಾರೆ. ಪ್ರತಿಭಾ ಪಾಟೀಲರನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಅವರ ಪ್ರಭಾವ ಇದೆಯೆಂದು ಆಯ್ಕೆ ಸಮಿತಿ ತಿಳಿಸಿದೆ.

ಪಟ್ಟಿಯಲ್ಲಿರುವ ಇತರ ಪ್ರಭಾವಿ ಮಹಿಳೆಯರು :

2ನೇ ಸ್ಥಾನ : ಚೀನಾದ ಉಪ ಸಚಿವೆಯಾದ ವುಯಿ
3ನೇ ಸ್ಥಾನ : ಟೆಮಾಸೆಕ್ ಹೋಲ್ಡಿಂಗ್ ನ ಹೊ ಚಿಂಗ್
4ನೇ ಸ್ಥಾನ : ಯುಎಸ್ ನ ವಿದೇಶಾಂಗ ಮಂತ್ರಿಯಾದ ಕಂಡೋಲೀಸಾ ರೈಸ್

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X