ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತ ಸ್ಪರ್ಧೆ : ಕೋಗಿಲೆಗಳೇ, ಹಾಡಿ ನಲಿದಾಡಿ!

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 30 : ಮಕ್ಕಳಲ್ಲಿ ಸಂಗೀತ ಅಭಿರುಚಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಗೀತ ಸ್ಪರ್ಧೆಯನ್ನು ಕಮಲಾ.ಟಿ.ಅವಧಾನಿ ಪ್ರತಿಷ್ಠಾನ ಏರ್ಪಡಿಸಿದೆ.

ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಸ್ಪರ್ಧೆಯಲ್ಲಿ 15 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶವಿದೆ. ವಿ.ಟಿ.ಅವಧಾನಿ ಮತ್ತು ಸಂಧ್ಯಾ ಅವಧಾನಿ ತಮ್ಮ ತಾಯಿ ಸಂಗೀತ ವಿದುಷಿ ಕಮಲಾ ಅವಧಾನಿ ಅವರ ನೆನಪಿನಲ್ಲಿ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಕರ್ನಾಟಕ ಸಂಗೀತದಲ್ಲಿ ಅಭಿರುಚಿಯುಳ್ಳ ಮಕ್ಕಳು ಆಡಿಯೋ ಕ್ಯಾಸೆಟ್‌ನಲ್ಲಿ ಐದು ಹಾಡುಗಳನ್ನು ಹಾಡಿ ಕಳಿಸಬೇಕು. ಅವುಗಳಲ್ಲಿ ತೀರ್ಪುಗಾರರು ಆಯ್ದ ಕೃತಿಯನ್ನು ಸ್ಪರ್ಧಿ ಅಂತಿಮ ಸುತ್ತಿನಲ್ಲಿ ಹಾಡಬೇಕು. ಸ್ಪರ್ಧೆ ಮತ್ತು ಬಹುಮಾನ ವಿತರಣೆ ಸಮಾರಂಭ ಸೆಪ್ಟೆಂಬರ್ 28ರಂದು ನಡೆಯಲಿದೆ.

ನಿಯಮಾವಳಿಗಳು :

1) ಭಾಗವಹಿಸುವ ಮಕ್ಕಳು ಕರ್ನಾಟಕ ವಾಸಿಗಳಾಗಿರಬೇಕು.
2) ಸ್ಫರ್ಧೆ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸೀಮಿತ.
3) 1ನೇ ಅಕ್ಟೋಬರ್ 2007ರೊಳಗೆ ಸ್ಪರ್ಧಿಯು 15 ವರ್ಷದೊಳಗಿರಬೇಕು. ವಯಸ್ಸು ಪ್ರಮಾಣಿಸಲು ಸರ್ಟಿಫಿಕೇಟ್ ನೀಡಬೇಕು.
4) 5 ಕೃತಿಗಳನ್ನು ಅಭ್ಯಾಸಮಾಡಿ ಅವುಗಳ ಹೆಸರನ್ನು ತಿಳಿಸಬೇಕು. ಇವುಗಳಲ್ಲಿ ತೀರ್ಪುಗಾರರು ಯಾವ ಕೃತಿಯನ್ನಾದರೂ ಆರಿಸಬಹುದು.
5) ಪ್ರತಿ ಅಭ್ಯರ್ಥಿಗೆ 10 ನಿಮಿಷ ಕಾಲಾವಕಾಶ ನೀಡಲಾಗುವುದು.
6) ತಂಬೂರ ಅಥವ ಶ್ರುತಿ ಪೆಟ್ಟಿಗೆ ಏರ್ಪಾಡನ್ನು ಮಾಡಿಕೊಳ್ಳಬೇಕು ಹಾಗೂ ಸ್ಪರ್ಧಾ ಸ್ಥಳಕ್ಕೆ ಬರಲು ಏರ್ಪಾಟು ಮಾಡಿಕೊಳ್ಳಬೇಕು.
7) ಅಂತಿಮ ಸುತ್ತಿನಲ್ಲಿ 20 ಸ್ಫರ್ಧಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
8) ಬೆಟ್ಟದಪುರದ ಸಂಕೇತಿ ಸಂಘ, ಬೆಂಗಳೂರು ಹೆಸರಿನಲ್ಲಿ 250 ರೂ.ಗಳಿಗೆ ಕ್ರಾಸ್ ಚೆಕ್ನ್ನು ಅರ್ಜಿ ಸಮೇತ ಕಳುಹಿಸಬೆಕು. (ಸ್ಪರ್ಧಿಗಳಿಗೆ ನಂತರ ಹಣ ಹಿಂತಿರುಗಿಸಲಾಗುವುದು)
9) ಅರ್ಜಿ ಕಳುಹಿಸಲು ಅಂತಿಮ ದಿನಾಂಕ ಸೆಪ್ಟೆಂಬರ್ 25.

ಬಹುಮಾನ ವಿವರ :

1ನೇ ಬಹುಮಾನ - 6000 ರೂ.
2ನೇ ಬಹುಮಾನ - 3000 ರೂ.
ಸಮಾಧಾನಕರ ಬಹುಮಾನ - 1000 ರೂ.

ಎಲ್ಲ 20ಸ್ಫರ್ಧಿಗಳಿಗೂ ಸೂಕ್ತ ಬಹುಮಾನಗಳನ್ನು ನೀಡಲಾಗುತ್ತದೆ.

ಅರ್ಜಿ ಕಳುಹಿಸಬೇಕಾದ ವಿಳಾಸ :

ಡಾ. ಸಂಧ್ಯಾ ಟಿ. ಅವಧಾನಿ,
ಪ್ರಾಧ್ಯಾಪಕರು ಹಾಗೂ ಇಲಾಖಾ ಮುಖ್ಯಸ್ಥರು,
ಫಿಜಿಯಾಲಜಿ ವಿಭಾಗ,
ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು,
ಬೆಂಗಳೂರು - 560 095

ದೂರವಾಣಿ: ಕಚೇರಿ: 080-22065060
ಮನೆ ದೂರವಾಣಿ : 080-25530928
ಮೊಬೈಲ್: 9449544740

ಸ್ಪರ್ಧೆ ನಡೆಯುವ ವಿಳಾಸ :

ಪಟ್ಟಾಭಿರಾಮ ಸೇವಾಮಂಡಲಿ, 13ನೇ ಮುಖ್ಯರಸ್ತೆ, 35ನೇ ಅಡ್ಡ ರಸ್ತೆ, 4ನೇ ಟಿ ಬ್ಲಾಕ್,(4ನೇ ಬ್ಲಾಕ್ ಅಂಚೆ ಕಛೇರಿ ಹಿಂಬಾಗ), ಜಯನಗರ, ಬೆಂಗಳೂರು

ವಿ. ಸೂ.: ಅರ್ಜಿ ಕಳುಹಿಸಿರುವ ಎಲ್ಲಾ ಸ್ಫರ್ಧಿಗಳಿಗೂ ತಾವು ಕಳುಹಿಸಿರುವ ನೋಂದಾಯಿತ ಹಣ 250 ರು.ಗಳನ್ನು ಹಿಂತಿರುಗಿಸಲಾಗುವುದು. ಸ್ಫರ್ಧಿ ಹಾಗು ಪೋಷಕರಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗುವುದು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X