ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡುಪಿಗೆ ಬಂದರೆ ಚೆನ್ನ!

By Staff
|
Google Oneindia Kannada News

ಉಡುಪಿ , ಆಗಸ್ಟ್ 29 : ಕೃಷ್ಣ ಜನ್ಮಾಷ್ಟಮಿ ಮತ್ತು ಕೃಷ್ಣ ಲೀಲೋತ್ಸವ ಇಲ್ಲಿನ ಪ್ರಸಿದ್ಧ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಸೆ.4ಮತ್ತು 5ರಂದು ನಡೆಯಲಿದೆ.

ಪರ್ಯಾಯ ಕೃಷ್ಣಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಉತ್ಸವಗಳು ನಡೆಯಲಿವೆ. ಸೆ.4ರ ಬೆಳಗಿನ ಜಾವದಿಂದ ಸೆ.5ರ ಮಧ್ಯರಾತ್ರಿ ತನಕ ನಿರಂತರ ಭಜನೆಯನ್ನು ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ಉದ್ದೇಶಕ್ಕಾಗಿ ನಾನಾ ಭಜನಾ ತಂಡಗಳು ಆಗಮಿಸಲಿವೆ.

ಶ್ರೀ ಕೃಷ್ಣನಿಗೆ ಉತ್ಸವದ ಅಂಗವಾಗಿ ವಿಶೇಷ ನಡುರಾತ್ರಿ ಪೂಜೆ ನಡೆಯಲಿದೆ. ಸೆ.5ರಂದು ಶ್ರೀ ಕೃಷ್ಣ ಲೀಲೋತ್ಸವ ನಡೆಯಲಿದೆ. ರಥೋತ್ಸವವೂ ಇದೆ. ರಾತ್ರಿ ಮಣ್ಣಿನ ಮಡಕೆಗಳ ಹೊಡೆಯುವ ಸಂಭ್ರಮ. ಬಣ್ಣದ ನೀರು ಎರಚಾಟ, ಹುಲಿ ಕುಣಿತ, ಜಾನಪದ ಕುಣಿತ ಮತ್ತಿತರ ವಿಶೇಷತೆಗಳು ಇಲ್ಲುಂಟು.

ಪರ್ಯಾಯ ಕೃಷ್ಣ ಮಠ ಈ ಸಂದರ್ಭದಲ್ಲಿ ಅನೇಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ.30ರಿಂದ ಸೆ.6ರ ತನಕ ನಾನಾ ಕಾರ್ಯಕ್ರಮಗಳು ಇಲ್ಲಿ ಜರುಗಲಿವೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X