ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು 8ವರ್ಷದಲ್ಲಿ ಕರ್ನಾಟಕದ ಕೊಳೆಗೇರಿಗಳು ಮಾಯ!

By Staff
|
Google Oneindia Kannada News

ಗುಲ್ಬರ್ಗ, ಆಗಸ್ಟ್ 29 : ಇನ್ನು ಕೇವಲ ಎಂಟು ವರ್ಷ ಅಂದರೆ 2015ರೊಳಗೆ ನಮ್ಮ ರಾಜ್ಯ ಕೊಳೆಗೇರಿ ರಹಿತ ಕರ್ನಾಟಕವಾಗಲಿದೆ ಎಂದು ವಸತಿ ಸಚಿವ ಡಿ.ಟಿ.ಜಯಕುಮಾರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಹೊಸ ವಸತಿ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಈ ಮಾಸ್ಟರ್ ಪ್ಲಾನ್ ಪ್ರಕಾರ ರಾಜ್ಯದ ಎಲ್ಲಾ ಕೊಳೆಗೇರಿಗಳ ನಿರ್ಮೂಲನೆ ನಡೆಯಲಿದೆ. ಆ ಜಾಗದಲ್ಲಿ ತಲೆ ಎತ್ತುವ ಸರ್ಕಾರದ ಸುವ್ಯವಸ್ಥಿತ ಮನೆಗಳು ಬಡವರಿಗೆ ಸಿಗಲಿವೆ ಎಂದರು.

ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರ 25ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಿದೆ. 2010ರೊಳಗೆ ಗುಡಿಸಲು ರಹಿತ ರಾಜ್ಯವನ್ನಾಗಿ ಕರ್ನಾಟಕವನ್ನು ಪರಿವರ್ತಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ. ಬಡವರಿಗಾಗಿ ನೀಡಿದ ನಿವೇಶನಗಳನ್ನು ಉಳ್ಳವರು ಆಕ್ರಮಿಸಿಕೊಂಡ ಪ್ರಕರಣಗಳು ಪತ್ತೆಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X