ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಲಾಂಟಾದಲ್ಲಿ ವಿಪ್ರೋ ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರ ಸ್ಥಾಪನೆ

By Staff
|
Google Oneindia Kannada News

ಮುಂಬೈ, ಆಗಸ್ಟ್ 28 : ಮಾಹಿತಿ ತಂತ್ರಜ್ಞಾನ ಸೇವೆಯಲ್ಲಿ ದೊಡ್ಡಣ್ಣನಂತಿರುವ ವಿಪ್ರೋ ಲಿಮಿಟೆಡ್ ಅಮೆರಿಕಾದ ಅಟ್ಲಾಂಟಾದಲ್ಲಿ ಅಭಿವೃದ್ಧಿ ಕೇಂದ್ರವನ್ನು ಸದ್ಯದಲ್ಲಿಯೇ ತೆರೆಯಲಿದೆ.

ಅಮೆರಿಕಾದ ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆ ನೀಡುವ ಉದ್ದೇಶದಿಂದ ಈ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸುತ್ತಿರುವುದಾಗಿ ವಿಪ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಗ್ರಾಹಕರ ವ್ಯಾಪಾರ ಕುರಿತಂತೆ ಹೆಚ್ಚಿನ ತಿಳಿವಳಿಕೆಯ ಅಗತ್ಯವಿರುವುದರಿಂದ ಅಲ್ಲಿಯೇ ಕೇಂದ್ರ ತೆರೆಯಲಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕಾ ವಾಸಿಗಳನ್ನೇ ನೇಮಿಸಿಕೊಳ್ಳುವುದಾಗಿ ವಿಪ್ರೋ ಟೆಕ್ನಾಲಜೀಸ್‌ನ ಅಧ್ಯಕ್ಷ ಪಿ.ಆರ್. ಚಂದ್ರಶೇಖರ್ ಹೇಳಿದ್ದಾರೆ.

ಅಟ್ಲಾಂಟಾದಲ್ಲಿ ಮೊದಲ ವರ್ಷ 200ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡು ಮೂರನೇ ವರ್ಷದ ಹೊತ್ತಿಗೆ ನೌಕರರ ಸಂಖ್ಯೆಯನ್ನು 500ಕ್ಕೆ ವೃದ್ಧಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.

ಜಾರ್ಜಿಯಾ, ಟೆಕ್ಸಾಸ್ ಮತ್ತು ವರ್ಜೀನಿಯಾದಲ್ಲಿಯೂ ಸಾಫ್ಟ್‌ವೇರ್ ಘಟಕಗಳನ್ನು ತೆರೆಯುವ ಉದ್ದೇಶವನ್ನು ವಿಪ್ರೋ ಹೊಂದಿದೆ. ಬೆಂಗಳೂರು ಮೂಲದ ವಿಪ್ರೋ ಈಗಾಗಲೆ ಬ್ರಜಿಲ್, ಪೂರ್ವ ಮತ್ತು ಪಶ್ಚಿಮ ಯುರೋಪ್, ಚೀನಾ, ಮೆಕ್ಸಿಕೊ, ಕೆನಡಾಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ.

(ಏಜೆನ್ಸಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X