ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳು ಬಾಡಿಗೆ ರಸೀದಿಯ ಅಡ್ ಜಸ್ಟ್ ಮೆಂಟ್ ಗೆ ಕಡಿವಾಣ?

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 28 : ಇನ್ನು ಮುಂದೆ ಮನೆ ಬಾಡಿಗೆ ರಸೀದಿಯಲ್ಲಿ ಪಾನ್(PAN) ವಿವರಗಳನ್ನು ನಮೂದಿಸಬೇಕಾಗುತ್ತದೆ. ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.

ಈ ನಿಯಮ ಜಾರಿಗೆ ಬಂದ ಮೇಲೆ, ಮನೆಮಾಲೀಕರು ತೆರಿಗೆ ಇಲಾಖೆಯನ್ನು ಸುಳ್ಳು ಬಾಡಿಗೆ ರಸೀತಿಗಳ ಮೂಲಕ ವಂಚಿಸುವ ಯತ್ನ ವಿಫಲವಾಗಲಿದೆ.

ಬಾಡಿಗೆದಾರರು ಸುಳ್ಳು ರಸೀದಿಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಈ ನಿಯಮದನ್ವಯ ಮನೆ ಮಾಲೀಕರು ಮತ್ತು ಬಾಡಿಗೆದಾರನ ಪಾನ್ ವಿವರಗಳನ್ನು ಲೆಕ್ಕಾಚಾರ ಮಾಡಲಾಗುತ್ತದೆ.

2007-08ನೇ ವರ್ಷದ ರಿಟರ್ನ್ ಅರ್ಜಿಯಲ್ಲಿ ಸರ್ಕಾರ, ಬಾಡಿಗೆದಾರರು ವಿವರಗಳನ್ನು ಪಾನ್‍ನಲ್ಲಿ ನಮೂದಿಸಬೇಕು ಎಂದು ತಿಳಿಸಿ ಇದು ಐಚ್ಛಿಕ ಎಂದಿತ್ತು. ಮುಂದಿನ ವರ್ಷದಿಂದ ರಿಟರ್ನ್ ಸಲ್ಲಿಕೆಯಲ್ಲಿ ಇದು ಕಡ್ಡಾಯವಾಗಲಿದೆ. ಆದ್ದರಿಂದ ಬಾಡಿಗೆದಾರರು ಮತ್ತು ಮಾಲೀಕರು ಸರಿಯಾದ ಬಾಡಿಗೆಯನ್ನು ನಿರ್ಧರಿಸಬೇಕಾಗುತ್ತದೆ.

ಎಷ್ಟೋ ಮಂದಿ ಮನೆ ಮಾಲೀಕರು ರಸೀದಿ ನೀಡುವುದಿಲ್ಲ ಎಂಬುದು ಕೆಲವರ ದೂರು. ಬಾಡಿಗೆ ನಿಯಂತ್ರಣ ಕಾಯ್ದೆಯನ್ನು ಮತ್ತಷ್ಟು ಪಾರದರ್ಶಕವಾಗಿಸಿ, ಹೊಸ ಕಾನೂನುಗಳನ್ನು ಜಾರಿಗೆ ತರಬೇಕು ಎಂಬುದು ಇನ್ನೂ ಕೆಲವರ ಒತ್ತಾಯ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X