ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇರಿ ಉತ್ಸವ : ಬುಧವಾರದಿಂದ ಶಿವಾಜಿನಗರ ಗಿಜಿಗಿಜಿ!

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 28 : ಸೇಂಟ್ ಮೇರೀಸ್ ಉತ್ಸವ ಶಿವಾಜಿ ನಗರದಲ್ಲಿ ಬುಧವಾರದಿಂದ ಸೆ.8ರವರೆಗೆ ನಡೆಯಲಿದೆ.

ಬುಧವಾರ ಸಂಜೆ 5ಕ್ಕೆ ಕ್ರೈಸ್ತರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಉತ್ಸವ ಆರಂಭವಾಗಲಿದೆ. ಸೆ.8ರಂದು ಭಾರೀ ಸಮಾರಂಭ ನಡೆಯಲಿದ್ದು, ಉತ್ಸವಕ್ಕೆ ತೆರೆ ಬೀಳಲಿದೆ. ಅಂದು ಬೆಳಗ್ಗೆ 5ರಿಂದ ರಾತ್ರಿ ತನಕ ಅರ್ಧ ಗಂಟೆಗೊಮ್ಮೆ ದೇಶದ ಎಲ್ಲ ಭಾಷೆಗಳಲ್ಲಿ ಪ್ರಾರ್ಥನೆ ಮೊಳಗಲಿದೆ.

ಲಕ್ಷಾಂತರ ಮಂದಿ ಉತ್ಸವದ ಮೊದಲ ಮತ್ತು ಕಡೆಯ ದಿನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಬಿಎಂಟಿಸಿ ವಿಶೇಷ ಬಸ್ ಸೇವೆಯನ್ನು ಕಲ್ಪಿಸಲು ನಿರ್ಧರಿಸಿದೆ. ಉತ್ಸವದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಸಹಜವಾಗಿಯೇ ಇರಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X