ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ : ನವೆಂಬರ್ ನಲ್ಲಿ ವಿಧಾನಮಂಡಲ ಅಧಿವೇಶನ

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 27 : ನವೆಂಬರ್ ನಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ ಎಂದು ವಿಧಾನ ಸಭಾಧ್ಯಕ್ಷ ಕೃಷ್ಣ ಸೋಮವಾರ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಇದು ಬೆಳಗಾವಿಯಲ್ಲಿ ನಡೆಯಲಿರುವ ಎರಡನೇ ಅಧಿವೇಶನವಾಗಿದ್ದು, ಈ ಹಿಂದೆ ಉಭಯ ಸದನಗಳ ಅಧಿವೇಶನ ಇಲ್ಲಿ ನಡೆದಿತ್ತು ಎಂದರು.

ಅಧಿವೇಶನದ ದಿನಾಂಕ ಮತ್ತು ಸ್ಥಳವನ್ನು ಸದ್ಯದಲ್ಲಿಯೇ ನಿಗದಿಪಡಿಸಲಾಗುತ್ತದೆ. ನಾಲ್ಕು ವಾರಗಳ ಕಾಲ ನಿರಂತರವಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಸುವರ್ಣ ಸೌಧ ನಿರ್ಮಾಣ ಈ ಉದ್ದೇಶಕ್ಕೆ ಪೂರಕವಾಗಲಿದೆ. ಎರಡನೇ ರಾಜಧಾನಿಯಾಗಿ ಬೆಳಗಾವಿಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರದ ಕ್ರಮ ನಮಗೆ ಖುಷಿ ತಂದಿದೆ ಎಂದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X