ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನ ಮಗುವಿಗೆ ಜನ್ಮ ನೀಡಿದ ತೊಂಬತ್ತರ ಕಿಲಾಡಿ ತಾತ!

By Super
|
Google Oneindia Kannada News

ಮನುಷ್ಯ ವಯಸ್ಸಾಗುತ್ತಿದ್ದ ಹಾಗೆ ಮಗುವಾಗುತ್ತಾನೆಂಬ ಮಾತಿದೆ. ಆದರೆ ಈ ನೌಜವಾನ್ ತನ್ನ ತೊಂಬತ್ತರ ವಯದಲ್ಲಿ ಮಗುವನ್ನು ಪಡೆದು ತನ್ನ ಪೌರುಷತ್ವವನ್ನು ಮೆರೆದಿದ್ದಾನೆ.

ರಾಜಸ್ತಾನದ ಪಾಂಚ್ ಇಮ್ಲಿ ಎಂಬ ಹಳ್ಳಿಯಲ್ಲಿ 125 ಕುಟುಂಬ ಸದಸ್ಯರೊಂದಿಗೆ ಜೀವನ ಸಾಗಿಸುತ್ತಿರುವ ಚಪಲ ಚನ್ನಿಗರಾಯ ನಾನು ರಾಮ್ ಜೋಗಿಯ 50 ವಯಸ್ಸಿನ ನಾಲ್ಕನೇ ಹೆಂಡತಿ ಸಾಧು ಈತನಿಗೆ ಮಗುವನ್ನು ಹೆತ್ತು ಕೊಟ್ಟಿದ್ದಾಳೆ. ಕ್ಷಮಿಸಿ ಮೊಮ್ಮಗುವನ್ನು ಹೆತ್ತುಕೊಟ್ಟಿದ್ದಾಳೆ.

ಯಾಕೆಂದರೆ ಈತ ಮದುವೆಯಾದದ್ದು ತನ್ನ ಮಗನ ಹೆಂಡತಿಯನ್ನ ಅಂದರೆ ಸೊಸೆಯನ್ನ. ಮಗ ಸತ್ತಿದ್ದರಿಂದ ಸಾಧುವಂತಿರುವ ಸಾಧುವನ್ನೇ ತನ್ನ ನಾಲ್ಕನೇ ಹೆಂಡತಿಯನ್ನಾಗಿ ಮಾಡಿಕೊಂಡ ಭೂಪನೀತ.

20ನೇ ವಯಸ್ಸಿಗೇ ಮೊದಲ ಮದುವೆಯಾದ ಜೋಗಿಗೆ 21 ಮಕ್ಕಳಿದ್ದಾರೆ. ತೊಂಬತ್ತನೇ ವಯಸ್ಸಿನಲ್ಲಿಯೂ ವೀರ್ಯವಂತನಾಗಿರುವ ಜೋಗಿಯ ಆರೋಗ್ಯದ ಗುಟ್ಟು ನಿಯಮಿತ ಊಟ ಮತ್ತು ಒಂಟೆಯ ಹಾಲು

English summary
A 90-year-old farmer, Nanu Ram Jogi from Panch Imli village in Rajasthan turned ninth time lucky from his fourth wife Sadu Devi, when she delivered a baby boy recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X